alex Certify BIG NEWS : ರಾಜ್ಯ ಸರ್ಕಾರದಿಂದ ‘ವಿಕಲಚೇತನ’ ನೌಕರರಿಗೆ ಗುಡ್ ನ್ಯೂಸ್ : ‘ಸಂಚಾರಿ ಭತ್ಯೆ’ ಮಂಜೂರು ಮಾಡಿ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರದಿಂದ ‘ವಿಕಲಚೇತನ’ ನೌಕರರಿಗೆ ಗುಡ್ ನ್ಯೂಸ್ : ‘ಸಂಚಾರಿ ಭತ್ಯೆ’ ಮಂಜೂರು ಮಾಡಿ ಆದೇಶ.!

ರಾಜ್ಯ ಸರ್ಕಾರದ ವಿಶೇಷ-ಚೇತನ ನೌಕರರುಗಳಿಗೆ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಅವರ ಮೂಲ ವೇತನದ 6% ದರದಲ್ಲಿ ಯಾವುದೇ ಗರಿಷ್ಠ ಮಿತಿ ಇಲ್ಲದೇ 1ನೇ ಡಿಸೆಂಬರ್ 2024 ರಿಂದ ಜಾರಿಗೆ ಬರುವಂತೆ ಮಾಹೆಯಾನ ವಿಶೇಷ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

ಈ ವಿಶೇಷ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಅಂಗವಿಕಲತೆ (ವಿಶೇಷ-ಚೇತನ) ಎಂದರೆ ಅದು ‘ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016’ ರಲ್ಲಿರುವಂತೆ ಇರತಕ್ಕದ್ದು ಮತ್ತು ಅದರಂತೆ ಅರ್ಥೈಸಿಕೊಳ್ಳತಕ್ಕದ್ದು. ಅದರಂತೆ, ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ಹಾಗೂ ವಾಕ್ ಮತ್ತು ಶ್ರವಣ ವೈಕಲ್ಯತೆಯುಳ್ಳ ನೌಕರರನ್ನೂ ಒಳಗೊಂಡಂತೆ ರಾಜ್ಯ ಸರ್ಕಾರದ ಎಲ್ಲಾ ವಿಶೇಷ-ಚೇತನ ನೌಕರರುಗಳು ದಿನಾಂಕ: 01.12.2024 ರಿಂದ ಜಾರಿಗೆ ಬರುವಂತೆ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

ಈ ಭತ್ಯೆಯನ್ನು ಮಂಜೂರು ಮಾಡಲು ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ನಿಬಂಧನೆಗಳು ಈಕೆಳಕಂಡಂತಿರತಕ್ಕದ್ದು:

1. 40% ರಷ್ಟು ಕನಿಷ್ಠ ಶಾಶ್ವತ ಅಂಗವಿಕಲತೆ ಹೊಂದಿರುವ ನೌಕರರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ii. ‘ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016’ ರ ಅವಕಾಶಗಳನ್ವಯ ನೇಮಕಗೊಂಡ ವಿಶೇಷ-ಚೇತನ ನೌಕರರುಗಳ ಪ್ರಕರಣಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಒತ್ತಾಯಿಸತಕ್ಕದ್ದಲ್ಲ ಮತ್ತು ಈ ಸೌಲಭ್ಯವನ್ನುಮೇಲೆ ತಿಳಿಸಿರುವ ಕನಿಷ್ಠ ಅಂಗವಿಕಲತೆಯ ಮಿತಿಗೊಳಪಟ್ಟು ಮಂಜೂರು ಮಾಡತಕ್ಕದ್ದು.

ii. ಯಾವುದೇ ವೈಜ್ಞಾನಿಕ ಉಪಕರಣಗಳ/ಸಾಧನಗಳ ಬಳಕೆಯಿಂದ ಸರಿಪಡಿಸಲಾಗದಂತಹ ಶಾಶ್ವತ ಅಂಗವಿಕಲತೆಯುಳ್ಳ ನೌಕರರಿಗೆ ಮಾತ್ರ ಈ ಸೌಲಭ್ಯವು ಸೀಮಿತವಾಗಿರುತ್ತದೆ.
iv. ವೈದ್ಯಕೀಯ ಉಪಕರಣಗಳ ಮುಖಾಂತರ ಸರಿಪಡಿಸಬಹುದಾದ ದೃಷ್ಟಿ ಮತ್ತು ಶ್ರವಣ ದೋಷ ಇರುವ ನೌಕರರುಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲು ಬರುವುದಿಲ್ಲ.

4. ‘ವಿಶೇಷ ಚೇತನರ ಹಕ್ಕುಗಳ ಅಧಿನಿಯಮ, 2016’ ನಿಯಮಗಳು ಜಾರಿಗೆ ಬರುವುದಕ್ಕೆ ಪೂರ್ವದಲ್ಲಿಯೇ ಖಾಯಂ ಸರ್ಕಾರದ ಸೇವೆಗೆ ನೇಮಕಗೊಂಡು ಪ್ರಸಕ್ತ ಚಾಲ್ತಿಯಲ್ಲಿರುವ ಆದೇಶ/ನಿಯಮಗಳ ಅವಕಾಶಗಳಡಿ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡಿರುವ ವಿಶೇಷ- ಚೇತನ ನೌಕರರ ಪ್ರಕರಣಗಳಲ್ಲಿ ಅವರು ಈಗಾಗಲೇ ಸಲ್ಲಿಸಿರುವ ಪ್ರಮಾಣ ಪತ್ರದ ಆಧಾರದ ಮೇಲೆ ಪರಿಷ್ಕೃತ ವಿಶೇಷ ಪ್ರಯಾಣ ಭತ್ಯೆಯನ್ನು ಮಂಜೂರು ಮಾಡತಕ್ಕದ್ದು. ಅವರುಗಳು ಹೊಸ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಒತ್ತಾಯಿಸತಕ್ಕದ್ದಲ್ಲ.
5. ರಾಜ್ಯ ಸರ್ಕಾರದ ಸೇವೆಗೆ ಸೇರಿದ ನಂತರ ಶಾಶ್ವತ ಅಂಗವಿಕಲತೆಯನ್ನು ಹೊಂದಿದ ನೌಕರರುಗಳ ಪ್ರಕರಣಗಳಲ್ಲಿ ಅವರುಗಳು, ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ಸಲ್ಲಿಸುವ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಅವರ ಅರ್ಹತೆಯನ್ನು ಪ್ರಕರಣವಾರು ನಿರ್ಧರಿಸತಕ್ಕದ್ದು. ಮೇಲಿನ ಕಂಡಿಕೆ 3ರಲ್ಲಿ ತಿಳಿಸಿರುವ ಕನಿಷ್ಠ ಅಂಗವಿಕಲತೆಯ ನಿಬಂಧನೆಯು ಈ ಪ್ರಕರಣಗಳಿಗೂ ಅನ್ವಯಿಸುತ್ತದೆ.

ಈ ಆದೇಶಗಳನ್ವಯ ಪ್ರಯಾಣ ಭತ್ಯೆಯನ್ನು ಪಡೆಯುತ್ತಿರುವ ವಿಶೇಷ-ಚೇತನ ನೌಕರರುಗಳು, ಸಮಾನಾಂತರ ಉದ್ದೇಶಕ್ಕೆ ಇತರೆ ಸರ್ಕಾರಿ ನೌಕರರುಗಳು ಮಾಹೆಯಾನ ಪಡೆಯುತ್ತಿರುವ ನಗರ ಪರಿಹಾರ ಭತ್ಯೆ ಮತ್ತು ನಿಗದಿತ ಪ್ರಯಾಣ ಭತ್ಯೆ/ವಾಹನ ಭತ್ಯೆ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ. ಪರಂತು. ಅವರುಗಳು ಸರ್ಕಾರದ ಕೆಲಸದ ನಿಮಿತ್ತ ಕೈಗೊಳ್ಳುವ ಅಧಿಕೃತ ಪ್ರವಾಸಕ್ಕೆ ನಿಯಮಾನುಸಾರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...