ಬೆಳಗಾವಿ: ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ ಶಿಶುವನ್ನೇ ತಾಯಿ ಬಿಟ್ಟು ಹೋಗಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಹೆತ್ತ ಕಂದಮ್ಮನನ್ನೇ ತಾಯಿಯೊಬ್ಬಳು ಕೆರೆಗೆ ಬಿಸಾಕಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಣಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 2 ತಿಂಗಳ ಹೆಣ್ಣುಮಗುವನ್ನು ತಾಯಿಯೊಬ್ಬಳು ಕೆರೆಗೆ ಬಿಸಾಕಿ ಓಡಿ ಹೋಗಿದ್ದಾಳೆ. ಕೆರೆಯಲ್ಲಿ ದನ-ಕರುಗಳ ಮೈ ತೊಳೆಯುತ್ತಿದ್ದವರು ಮಗುವನ್ನು ತಕ್ಷಣ ರಕ್ಷಣೆ ಮಾಡಿದ್ದಾರೆ. ಕೂಡಲೇ ಓಡಿ ಹೋಗುತ್ತಿದ್ದ ತಾಯಿಯನ್ನು ಸ್ಥಳೀಯರು ಹಿಡಿದು ನಿಲ್ಲಿಸಿ, ಬುದ್ಧಿ ಹೇಳಿದ್ದಾರೆ.
ಬಳಿಕ ಮಗುವನ್ನು ತಾಯಿಯ ಕೈಗೆ ಒಪ್ಪಿಸಿದ್ದಾರೆ. ಮಗುವನ್ನೆ ಕೆರೆಗೆ ಬಿಸಾಕಿದ ತಾಯಿ ಯಾರು? ಮಹಿಳೆ ಯಾವ ಕಾರಣಕ್ಕೆ ಇಂತಹ ಕೃತ್ಯವೆಸಗಿದಳು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.