ಡಿಸೆಂಬರ್ 18ಕ್ಕೆ ಬಿಡುಗಡೆಯಾಗಲಿದೆ ‘ರಾಯಲ್’ ಚಿತ್ರದ ಮತ್ತೊಂದು ಹಾಡು

ದಿನಕರ್ ಎಸ್ ಆಕ್ಷನ್ ಕಟ್ ಹೇಳಿರುವ ‘ರಾಯಲ್’ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು,  ಗಾನಪ್ರಿಯರ ಗಮನ ಸೆಳೆಯುತ್ತಿವೆ. ಇದೀಗ ‘ರಾಯಲ್’ ನ  ಮತ್ತೊಂದು ವಿಡಿಯೋ ಹಾಡು ಇದೇ ಡಿಸೆಂಬರ್ 18ರಂದು ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ವಿರಾಟ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿದ್ದು, ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಗೋಪಾಲ್ ದೇಶಪಾಂಡೆ, ಅಭಿಲಾಷ್ ಉಳಿದ ತಾರಂಗಣದಲ್ಲಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರ್ ನಲ್ಲಿ  ಜಯಣ್ಣ- ಭೋಗೇಂದ್ರ ನಿರ್ಮಾಣ ಮಾಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ,  ಡಾ. ಕೆ. ರವಿ ವರ್ಮ ಅವರ ಸಾಹಸ ನಿರ್ದೇಶನ, ಸಂಕೇತ್  ಛಾಯಾಗ್ರಹಣ, ಜಾನಿ ಮಾಸ್ಟರ್ ನೃತ್ಯ ನಿರ್ದೇಶನವಿದೆ.

 

View this post on Instagram

 

A post shared by Kannadapichhar (@kannada_pichhar)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read