ನಟ ನಾಗ ಚೈತ್ಯನ್ಯರನ್ನು ಡಿಸೆಂಬರ್ 4 ರಂದು ವಿವಾಹವಾಗಿದ್ದ ಶೋಭಿತಾ ಧೂಲಿಪಾಲಾ ಕೇವಲ 10 ದಿನಗಳಲ್ಲೇ ಸಾರ್ವಜನಿಕವಾಗಿಯೇ ಪತಿಯ ಮೇಲೆ ಮುನಿಸಿಕೊಂಡರಾ ಎಂಬ ಚರ್ಚೆ ಈಗ ಆರಂಭವಾಗಿದೆ. ಇದಕ್ಕೆ ಕಾರಣವಾಗಿದ್ದು, ವಿವಾಹದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದಂಪತಿ ನಡೆ.
ಇಬ್ಬರು ಮದುವೆಯಾದ ನಂತರ ಮೊದಲ ಬಾರಿಗೆ ಆತ್ಮೀಯರೊಬ್ಬರ ವಿವಾಹ ಸಮಾರಂಭಕ್ಕೆ ಹೋಗಿದ್ದರು. ಶೋಭಿತಾ ಧೂಲಿಪಾಲಾ – ನಾಗ ಚೈತನ್ಯ ಈ ಸಮಾರಂಭಕ್ಕೆ ಬರುತ್ತಿದ್ದಾರೆ ಎಂದು ಮಾಧ್ಯಮದವರಿಗೆ ತಿಳಿದು ತಕ್ಷಣ ಅವರೂ ಆಗಮಿಸಿದ್ದರು.
ಮಾಧ್ಯಮದವರು ನವದಂಪತಿಗಳಿಗೆ ಫೋಟೋಗೆ ಪೋಸ್ ನೀಡುವಂತೆ ಕೇಳಿದಾಗ, ನಾಗ ಚೈತನ್ಯ ಸ್ವಲ್ಪ ಸಿಟ್ಟಿನ ಮುಖ ಮಾಡಿದ್ದಾರೆ. ಆದರೆ ಶೋಭಿತಾ ಧೂಲಿಪಾಲಾ ಬಂದು ಫೋಟೋ ತೆಗೆಸಿಕೊಳ್ಳಿ ಎಂದು ಕೇಳಿದರಲ್ಲದೇ, ನಾನು ಬರುವುದು ಬೇಡವೆಂದಾದರೆ ನೀವು ಹೋಗಿ ಫೋಟೋ ತೆಗೆಸಿಕೊಂಡು ಹೋಗಿ ಎಂದು ಕೊಂಚ ಸಿಟ್ಟಾಗಿ ಉತ್ತರಿಸಿದ್ದಾರೆ.
ಅವರಿಬ್ಬರು ಹಾಗೆ ಮಾತನಾಡಿರುವ ವಿಡಿಯೋ ನೆಟ್‌ನಲ್ಲಿ ಹರಿದಾಡುತ್ತಿದ್ದು, ಶೋಭಿತಾ ಧೂಲಿಪಾಲಾ ಮತ್ತು ನಾಗ ಚೈತನ್ಯ ಮದುವೆಯಾಗಿ 10 ದಿನಗಳಲ್ಲೇ ಹೇಗೆ ಜಗಳವಾಡುತ್ತಿದ್ದಾರೆ ನೋಡಿ ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಆದ್ರೆ ಈ ವಿಡಿಯೋ ನೋಡಿದ ಕೆಲ ನೆಟಿಜನ್ ಗಳು ಮದುವೆಯಾದ ಮೇಲೆ ಇದೆಲ್ಲಾ ಮಾಮೂಲು. ಸಣ್ಣ ಪುಟ್ಟ ವಿಷಯಗಳಿಗೆ ಗಲಾಟೆ ಮಾಡೋದು ಬಿಡಿ. ಗಂಡ – ಹೆಂಡತಿ ಜಗಳವಾಡೋದು ಸಹಜ. ಇದು ಸೆಲೆಬ್ರಿಟಿಯಿಂದ ಸಾಮಾನ್ಯರ ಜೀವನದಲ್ಲೂ ಸಂಭವಿಸುತ್ತದೆ ಎಂದಿದ್ದಾರೆ.