ಬೆಂಗಳೂರು: ಬಸ್ ನಿಲ್ದಾಣ, ರೈಲು ನಿಲ್ದಾಣ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷುಕರು ಭಿಕ್ಷಾಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇದೀಗ ನಮ್ಮ ಮೆಟ್ರೋ ಒಳಗೆ ವ್ಯಕ್ತಿಯೋರ್ವ ಭಿಕ್ಷಾಟನೆ ಮಾಡಿದ್ದು, ಪ್ರಯಾಣಿಕರು ದಂಗಾಗಿದ್ದಾರೆ.
ವಿಶೇಷ ಚೇತನ ವ್ಯಕ್ತಿಯೊಬ್ಬ ನಮ್ಮ ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾನೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದ ವ್ಯಕ್ತಿ, ಭಿಕ್ಷಾಟನೆ ನಡೆಸಿದ್ದಾನೆ. ತನಗಿರುವ ಅಂಗವೈಕಲ್ಯದ ಬಗ್ಗೆ ತೋರಿಸಿ ಭಿಕ್ಷೆ ಬೀಡಿ ಹಣ ಪಡೆದಿರುವ ಘಟನೆ ನಡೆದಿದೆ.
ಈ ಹಿಂದೆ ರೈತರೊಬ್ಬರಿಗೆ ಮೆಟ್ರೋ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದೀಗ ವ್ಯಕ್ತಿಯೋರ್ವ ಕ್ಯೂ ಆರ್ ಕೂಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದು ಮೆಟ್ರೋದೊಳಗೆ ಬಂದು ಭಿಕ್ಷಾಟನೆ ನಡೆಸಿದ್ದು, ಅಚ್ಚರಿಗೆ ಕಾರಣವಾಗಿದೆ. ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೆಡಲು ಶುರು ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಮೆಟ್ರೋ ಟ್ರೇನ್ ನಲ್ಲಿ ವ್ಯಕ್ತಿ ಭಿಕ್ಷಟನೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.