alex Certify SHOCKING: ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿದ್ದ ಹುಡುಗಿಗೆ ಮಗು ಜನನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿದ್ದ ಹುಡುಗಿಗೆ ಮಗು ಜನನ

ಆಂಧ್ರಪ್ರದೇಶದ ಅಮರಾವತಿ ಏಲೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್‌ನಲ್ಲಿ ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿರುವ ಅಪ್ರಾಪ್ತ ಕ್ರಿಶ್ಚಿಯನ್ ಹುಡುಗಿ ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ಕೊಂದಿದ್ದಾಳೆ. ಹಾಸ್ಟೆಲ್ ಅನ್ನು ಚರ್ಚ್-ಆಡಳಿತ ಸಂಸ್ಥೆ ಏಲೂರಿನ “ಡಯೋಸಿಸನ್” ನಡೆಸುತ್ತಿದ್ದ, ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಪ್ರಶಿಕ್ಷಣಾರ್ಥಿ ಪ್ರೀಸ್ಟ್‌ ನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಸನ್ಯಾಸಿನಿ ತರಬೇತಿ ಪಡೆಯುತ್ತಿರುವ ಕ್ರಿಶ್ಚಿಯನ್ ಹುಡುಗಿ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯವಳು ಮತ್ತು ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿ.

8 ಡಿಸೆಂಬರ್ 2024 ರಂದು, ಅವಳು ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಕ್ಷಣವೇ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದು ಅದನ್ನು ಕೊಂದಿದ್ದಾಳೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪೊಲೀಸ್ ಇನ್ಸ್ ಪೆಕ್ಟರ್ ರಮಣ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದರು. ಈ ಘಟನೆಯು ಕಾನ್ವೆಂಟ್ ಹಾಸ್ಟೆಲ್ ಆಡಳಿತದ ನಿರ್ಲಕ್ಷ್ಯವನ್ನು ಬಯಲು ಮಾಡಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...