ನವದೆಹಲಿ: ದೇಶದ ಅಂಚೆ ಕಚೇರಿಗಳಲ್ಲಿ ಹೆಚ್ಚುವರಿಯಾಗಿ 600 ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯುವುದಾಗಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ನಡೆದ ಭಾರತೀಯ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಚೆ ಇಲಾಖೆ ದೇಶಾದ್ಯಂತ 6.40 ಲಕ್ಷ ಕಚೇರಿಗಳನ್ನು ಹೊಂದಿದೆ. ವಿಶ್ವದ ಯಾವುದೇ ದೇಶವು ಇಷ್ಟು ಸಂಖ್ಯೆಯ ಅಂಚೆ ಕಚೇರಿಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಜನರಿಗೆ ಪಾಸ್ಪೋರ್ಟ್ ಸೇವೆ ಒದಗಿಸಲು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಹೆಚ್ಚುವರಿ 600 ಸೇವಾ ಕೇಂದ್ರಗಳನ್ನು 2028 -29 ರೊಳಗೆ ತೆರೆಯಲಾಗುವುದು. ಇವುಗಳ ಮೂಲಕ ವಾರ್ಷಿಕ ಒಂದು ಕೋಟಿ ಜನರಿಗೆ ಸೇವೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
2017ರಲ್ಲಿ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯಲಾಗಿದೆ. ಹಾಲಿ ಇರುವ 442 ಕೇಂದ್ರಗಳ ಮೂಲಕ ಇದುವರೆಗೆ 1.52 ಕೋಟಿ ಹೆಚ್ಚು ಜನರಿಗೆ ಪಾಸ್ಪೋರ್ಟ್ ಸಂಬಂಧಿತ ಸೇವೆಗಳನ್ನು ಒದಗಿಸಲಾಗಿದೆ ಎಂದು ಹೇಳಲಾಗಿದೆ.