ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಬಿಬಿಎಂಪಿ ಪಾರ್ಕ್ ‘ನ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಂಧಿನಗರದ ತುಳಸಿತೋಪು ಬಳಿಯಿರುವ ಬಿಬಿಎಂಪಿ ಪಾರ್ಕ್ ‘ನ ಗೇಟ್ ತುಕ್ಕು ಹಿಡಿದಿತ್ತು. ಇಂದು ಏಕಾಏಕಿ ಕುಸಿದು ಸೆಕ್ಯೂರಿಟಿ ಗಾರ್ಡ್ ಮೈ ಮೇಲೆ ಬಿದ್ದಿದೆ.ಪರಿಣಾಮ ಸೆಕ್ಯೂರಿಟಿ ಗಾರ್ಡ್ ತಲೆ ಹಾಗೂ ಕಣ್ಣಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
