ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿಸೆಂಬರ್ 11ರಂದು ಸರ್ಕಾರಿ ರಜೆ ಘೋಷಿಸಿದೆ. ಈ ಕಾರಣದಿಂದಾಗಿ ಇಂದು ನಡೆಯಬೇಕಿದ್ದ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಜಿಟಿಟಿಸಿ ನೇಮಕಾತಿ ಪರೀಕ್ಷೆಯನ್ನು ಡಿಸೆಂಬರ್ 12ರಂದು ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಡಿಸೆಂಬರ್ 12ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12:30 ರವರೆಗೆ ಪತ್ರಿಕೆ -1, ಮಧ್ಯಾಹ್ನ 2:30 ರಿಂದ ಸಂಜೆ 4.30 ರವರೆಗೆ ಪತ್ರಿಕೆ -2 ಪರೀಕ್ಷೆ ನಡೆಯಲಿದೆ. ಉಳಿದಂತೆ ಡಿಸೆಂಬರ್ 14ರ ಪರೀಕ್ಷಾ ವೇಳಾಪಟ್ಟಿಯಲ್ಲಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಹೇಳಲಾಗಿದೆ.