ಬೆಂಗಳೂರು : ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತಿಮ ಯಾತ್ರೆ ಆರಂಭವಾಗಿದೆ.
ಸದಾಶಿವನಗರದ ಎಸ್ ಎಂ ಕೃಷ್ಣಅವರ ‘ಶಾಂಭವಿ’ ನಿವಾಸದಿಂದ ಆರಂಭವಾಗಿದೆ. ಬೆಂಗಳೂರಿನ ಸದಾಶಿವನಗರ ಸ್ವಗೃಹದಿಂದ ಹೂವಿನಿಂದ ಅಲಂಕೃತಗೊಂಡ ವಾಹನದಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತಿದೆ.
ಬೆಂಗಳೂರಿನ ಟೌನ್ ಹಾಲ್, ಮೈಸೂರು ಸರ್ಕಲ್, ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಮಂಡ್ಯದ ಮದ್ದೂರಿಗೆ ಪಾರ್ಥಿವ ಶರೀರ ತಲುಪಲಿದೆ. ಮೃತರ ಸ್ವಗೃಹದಲ್ಲಿ ಮಧ್ಯಾಹ್ನ 3 ಗಂಟೆಗೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ, ಮಧ್ಯಾಹ್ನ 3 ಗಂಟೆಯ ನಂತರ ಒಕ್ಕಲಿಗ ಸಂಪ್ರದಾಯದಿಂದ ಅಂತ್ಯಸಂಸ್ಕಾರ ಕಾರ್ಯ ನೆರವೇರಲಿದೆ.