ಧನುಷ್ ಅಭಿನಯದ ಬಿಜು ನಿರ್ದೇಶನದ ‘After ಬ್ರೇಕ್ ಅಪ್’ ಚಿತ್ರದ ಟೀಸರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಾಳೆ ಇದರ ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಫ್ರೈಡೇ ಮ್ಯಾಜಿಕ್ ಸ್ಟುಡಿಯೋಸ್ ಲಾಂಛನದಲ್ಲಿ ವಿ.ಪಿ. ಯೋಗೇಶ್, ನಿಸರ್ಗ ಹಾಗೂ ಪ್ರಿಯಾ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಪ್ರವೀಣ್ ಸ್ಯಾಮ್ ಸಂಗೀತ ಸಂಯೋಜನೆ ನೀಡಿದ್ದು, ಧನುಷ್ ಸೇರಿದಂತೆ ನಿಸರ್ಗ ಮಂಜುನಾಥ್ ಹಾಗೂ ಮಧುಸೂದನ್ ಬಣ್ಣ ಹಚ್ಚಿದ್ದಾರೆ. ಬಿಜು ಡೇವಿಡ್ ಕಲಾ ನಿರ್ದೇಶನ, ಮಂಜು ನಾಗಪ್ಪ ಸಾಹಸ ನಿರ್ದೇಶನ, ಮೋರ ಸಂಕಲನ ಹಾಗೂ ವಿನೋದ್ ಲೋಕಣ್ಣವರ್ ಛಾಯಾಗ್ರಹಣವಿದೆ. ಇದೇ ಡಿಸೆಂಬರ್ 20ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.