‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2019 ರಲ್ಲಿ ತೆರೆಕಂಡ ಎಂ.ಜಿ. ಶ್ರೀನಿವಾಸ್ ನಿರ್ದೇಶನದ ‘ಬೀರ್ಬಲ್ ಟ್ರೈಲಾಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ‘ಅಪ್‌ಸ್ಟಾರ್ಟ್ಸ್’ ನಲ್ಲಿ ತೆರೆ ಹಂಚಿಕೊಂಡರು.
ಬಳಿಕ ಯಾವುದೇ ಅವಕಾಶವಿಲ್ಲದೆ ಇದ್ದ ರುಕ್ಮಿಣಿ ವಸಂತ್ ಅವರಿಗೆ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಕೈಬೀಸಿ ಕರೆಯಿತು. ಪ್ರಿಯಾ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದರು. ಇದರ ಮುಂದುವರಿದ ಭಾಗವನ್ನು ಕೂಡ ಅದೇ ವರ್ಷದಂದು ಬಿಡುಗಡೆ ಮಾಡಲಾಯಿತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರದಲ್ಲಿ ಇತ್ತೀಚಿಗಷ್ಟೇ ಕಾಣಿಸಿಕೊಂಡಿದ್ದ ರುಕ್ಮಿಣಿ ವಸಂತ್, ತಮಿಳಿನ ‘ace’ ಹಾಗೂ ‘SKxARM’ ದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ರುಕ್ಮಿಣಿ ವಸಂತ್ ಅವರಿಗೆ ಹಲವಾರು ನಟ – ನಟಿಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.