ಭಾರತದಲ್ಲಿ ಚಿನ್ನದ ದರ ಹಾವು ಏಣಿ ಆಟದಂತಾಗಿದೆ. ಇತ್ತೀಚೆಗೆ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಚಿನ್ನದ ಬೆಲೆ ಗ್ರಾಂಗೆ 75 ರೂನಷ್ಟು ಭಾರೀ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ 7,200 ರೂ ಗಡಿ ದಾಟಿದೆ, ಅಪರಂಜಿ ಚಿನ್ನದ ಬೆಲೆ 7,860 ರೂಗೆ ಏರಿದೆ.
ಬೆಳ್ಳಿ ಬೆಲೆ ಭಾರಿ ಏರಿಕೆ ಆಗಿದೆ. ಗ್ರಾಂಗೆ 4ರಿಂದ 4.50 ರೂವರೆಗೂ ಬೆಳ್ಳಿ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 92 ರೂ ಇದ್ದ ಬೆಳ್ಳಿ ಬೆಲೆ 96.50 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,050 ರುಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,050 ರೂ ಇದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,600 ರೂ ಇದೆ ಹಾಗೂ ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ ಆಗಿದೆ.