ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 5 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುಮಾರು 150 ಅಡಿ ಆಳದಲ್ಲಿ ಬಿದ್ದಿರುವ ಬಾಲಕನ ರಕ್ಷಣೆಗೆ ಹರಸಾಹಸ ನಡೆಸಲಾಗಿದೆ.
ಕೊಳವೆ ಬಾವಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದ್ದು, ಕೊಳವೆ ಬಾವಿಗೆ ಸಮನಾಂತರವಾಗಿ ಗುಂಡಿ ತೋಡುವ ಪ್ರಕ್ರಿಯೆ ನಡೆಸಿದ್ದು, ಮಗುವನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗಿದೆ.
ದೌಸಾ ಜಿಲ್ಲೆಯ ಕಾಲಿಖಾಡ್ ಗ್ರಾಮದಲ್ಲಿ ಐದು ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ತೆರೆದ ಬೋರ್‌ವೆಲ್‌ಗೆ ಬಿದ್ದಿದೆ. ಮಗು ಬಿದ್ದ ಬೋರ್‌ವೆಲ್ 150 ಅಡಿ ಆಳವಿತ್ತು ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಇದೇ ವೇಳೆ ಶಾಸಕ ಡಿ.ಸಿ.ಬೈರವ ಕೂಡ ಸ್ಥಳದಲ್ಲಿಯೇ ಇದ್ದಾರೆ.
ಸದ್ಯ ಬೋರ್‌ವೆಲ್‌ನಲ್ಲಿರುವ ಮಗುವಿಗೆ ಪೈಪ್ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡ ಮತ್ತು ಆಡಳಿತವಿದೆ. 5 ಜೆಸಿಬಿ ಯಂತ್ರಗಳು ಮತ್ತು 3 ಟ್ರ್ಯಾಕ್ಟರ್‌ಗಳ ಸಹಾಯದಿಂದ ಅಗೆಯುವ ಕೆಲಸ ನಡೆಯುತ್ತಿದೆ.