ಮಲಯಾಳಂ ನಟಿ ಪ್ರಗ್ಯಾ ನಾಗ್ರಾ ಅವರ ಡೀಪ್ ಫೇಕ್ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾ ವೈರಲ್ ಆಗಿದೆ.
ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಪ್ರಗ್ಯಾ ನಾಗ್ರಾ ಅವರ ಖಾಸಗಿ ಫೋಟೋ, ವಿಡಿಯೋ ಭಾರಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದರು.
ಎಕ್ಸ್ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಬಹುಭಾಷಾ ನಟಿ ಈ ವಿಡಿಯೋ ನನ್ನದಲ್ಲಿ. ಇದು ಎಐ ರಚಿಸಿದ ಡೀಪ್ ಫೇಕ್ ವಿಡಿಯೋ ಆಗಿದೆ ಎಂದು ಹೇಳಿದ್ದಾರೆ . ಹಾಗೂ ಈ ಘಟನೆಯನ್ನು “ಕೆಟ್ಟ ಕನಸು” ಎಂದು ಕರೆದಿದ್ದಾರೆ .
ಶುಕ್ರವಾರ, ನಾಗ್ರಾ ಅವರದ್ದು ಎನ್ನಲಾದ ಖಾಸಗಿ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿ ಅಭಿಮಾನಿ ವಲಯದ ಗೊಂದಲಕ್ಕೊಳಗಾಗಿತ್ತು. ಸೋಷಿಯಲ್ ಮೀಡಿಯಾ ಸೈಟ್ಗಳಲ್ಲಿ, ಆಕೆಗೆ ಸಂಬಂಧಿಸಿದ ವೀಡಿಯೊ ತುಣುಕುಗಳು ಹರಿದಾಡುತ್ತಿದ್ದವು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಅನೇಕ ನಟಿಯರು ಡೀಪ್ ಫೇಕ್ ವೀಡಿಯೊಗಳಿಗೆ ಬಲಿಯಾಗುತ್ತಿರುವುದರಿಂದ ಕ್ಲಿಪ್ ಗಳ ಸತ್ಯಾಸತ್ಯತೆ ಪ್ರಶ್ನಾರ್ಹವಾಗಿದೆ.