ಬಳ್ಳಾರಿ: ಬಳ್ಳಾರಿಯ ಜಿಲ್ಲಾಸ್ಪತ್ರೆ ಬಿಮ್ಸ್ ನಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವಿ ಫ್ಲೂಯಿಡ್ ವರದಿ ಅಧಿಕಾರಿಗಳ ಕೈ ಸೇರಿದೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೇ ಕಾರಣವಾಯಿತೆ ಎಂಬ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ ವರದಿಯಲ್ಲಿನ ಅಂಶಗಳು.
ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. 3 ಬ್ಯಾಚ್ ಫ್ಲೂಯಿಡ್ ನಲ್ಲಿ 1 ಬ್ಯಾಚ್ ನ ವರದಿ ಬಹಿರಂಗವಾಗಿದೆ. ಐವಿ ಫ್ಲೂಯಿಡ್ ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿವೆ.
ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಗ್ಲೂಕೋಸ್ ನಲ್ಲಿ ನ್ಯೂನ್ಯತೆ ಕಂಡುಬಂದಿದೆ. ಬಳ್ಳಾರಿಯ ಬಿಮ್ಸ್ ಆಸ್ಪತ್ತೆಯಲ್ಲಿ ಬಾಣಂತಿಯರಿಗೆ ಬಳಸಿದ್ದ ಐವಿ ಫ್ಲೂಯಿಡ್ ನ 3 ಬ್ಯಾಚ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿದಲಾಗಿತ್ತು. ಇದೀಗ ಲ್ಯಾಬ್ ವರದಿ ಅಧಿಕಾರಿಗಳ ಕೈ ಸೇರಿದ್ದು, ಒಂದು ಬ್ಯಾಚ್ ನ ವರದಿಯಲ್ಲಿ ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ.