ಬೆಳಗಾವಿ: ಮೈದುನನ ಜೊತೆಗಿನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಮಹಿಳೆಗೆ 7 ವರ್ಷದ ಹಿಂದೆ ಮೊರಬ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯ ತಮ್ಮ -ಮೈದುನನ ಜೊತೆಗೆ ಮಹಿಳೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಇಬ್ಬರ ನಡುವೆ ಕೆಲವು ದಿನಗಳಿಂದ ಅನೈತಿಕ ಸಂಬಂಧವಿದ್ದು, ಈ ವೇಳೆ ಇಬ್ಬರು ಫೋಟೋ ಕೊಂಡಿದ್ದಾರೆ.
ಅತ್ತಿಗೆ ಜೊತೆಗಿರುವ ಫೋಟೋ ಸೇರಿಸಿ ಮೈದುನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದಾನೆ. ಇದನ್ನು ನೋಡಿದ ಗ್ರಾಮದ ಕೆಲವು ಯುವಕರು ಮಹಿಳೆಯ ಪತಿಗೆ ವಿಷಯ ತಿಳಿಸಿದ್ದಾರೆ. ಆತ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳವಾಡಿದ್ದು, ನಂತರ ಹಿರಿಯರು ಸೇರಿ ಬುದ್ಧಿವಾದ ಹೇಳಿದ್ದಾರೆ. ಮಹಿಳೆಯನ್ನು ಆಕೆಯ ಅಕ್ಕನ ಮನೆಗೆ ಕಳುಹಿಸಿದ್ದು, ಗುಪ್ತವಾಗಿದ್ದ ಮೈದುನನ ಜೊತೆಗಿನ ಅಕ್ರಮ ಸಂಬಂಧ ಬಹಿರಂಗವಾಗಿದ್ದರಿಂದ ಮಹಿಳೆ ಅಕ್ಕನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಮೈದುನ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಾಗಿದ್ದು, ಅತ್ತಿಗೆ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಮೈದುನ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.