ಮಡಿಕೇರಿ: ಮನೆಯಿಂದ ಕಾಲೇಜಿಗೆಂದು ಹೋಗಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ನಾತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.
ಹಬ್ಬಕ್ಕೆಂದು ಹಾಸ್ಟೇಲ್ ನಿಂದ ಮನೆಗೆ ಬಂದಿದ್ದ ಯುವಕ ರಜೆ ಮುಗಿಸಿ ವಾಪಾಸ್ ಹೊರಟಿದ್ದ. ಹೀಗೆ ಹೋದವನು ನಾಪತ್ತೆಯಾಗಿದ್ದಾನೆ. ಕಳೆದ ಒಂದು ತಿಂಗಳಿಂದ ತನ್ನ ಮಗ ನಿಗೂಢವಾಗಿ ನಾಪತ್ತೆಯಾಗಿದ್ದಾಗಿ ಯುವಕನ ತಾಯಿ ಮಗನ ಫೋಟೋ ಹಿಡಿದುಕೊಂಡು ಮಗನಿಗಾಗಿ ಹುಡುಕಾಡುತ್ತಿದ್ದಾರೆ.
ಕೊಡಗಿನ ಗೋಣಿಕೊಪ್ಪದ ಯುವಕ ದೀಕ್ಷಿತ್ (17) ದಕ್ಷಿಣ ಕನ್ನಡದ ಕಾಲೇಜೊಂದರಲ್ಲೊ ಓದುತ್ತಿದ್ದ. ಒಬ್ಬನೇ ಮಗನನ್ನು ಚನ್ನಾಗಿ ಓದಿಸಬೇಕೆಂದು ತಾಯಿ ಹಾಸ್ಟೇಲ್ ನಲ್ಲಿಟ್ಟು ಓದಿಸುತ್ತಿದ್ದರು. ದೀಪಾವಳಿ ಹಬ್ಬಕೆಂದು ಮನೆಗೆ ಬಂದ ಮಗ, ಹಬ್ಬ ಮುಗಿಸಿ ವಾಪಾಸ್ ಹೋಗಿದ್ದ. ಹೋಗೆ ಹೋದವನು ಹಾಸ್ಟೇಲ್ ಗೂ ತಲುಪಿಲ್ಲ, ಕಾಲೇಜಿಗೂ ಹೋಗಿಲ್ಲ. ದೀಕ್ಷಿತ್ ಎಲ್ಲಿ ಹೋಗಿದ್ದಾನೆ ಎಂಬುದೇ ತಿಳಿಯುತ್ತಿಲ್ಲ.
ಮಗನ ಹುಡುಕಾಡಿ ನೊಂದಿರುವ ತಾಯಿ ಕೊಡಗಿನ ಗೋಣಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಯುವಕ ದೀಕ್ಷಿತ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆತನ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿದ್ದಾರೆ