ರಾಯಚೂರು: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್ಐ ಅವಿನಾಶ್ ಕಾಂಬ್ಳೆ ಅವರನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಎಸ್ ಪಿ ಎಸ್ .ಪುಟ್ಟಮಾದಯ್ಯ
ಆದೇಶ ಹೊರಡಿಸಿದ್ದಾರೆ.
ಅವಿನಾಶ್ ಕಾಂಬ್ಳೆ ರಾಯಚೂರು ಗ್ರಾಮಾಂತರ ವ್ಯಾಪ್ತಿಯ ಇಡಪನೂರು ಠಾಣೆ ಪಿಎಸ್ಐ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮಿರ್ಜಾಪುರ ಗ್ರಾಮದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದು, 6 ಜನರು ಗಾಯಗೊಂಡಿದ್ದರು. ಗಲಾಟೆ ವೇಳೆ ಮೃತ ಭೀಮೇಶ್ ಕುಟುಂಬದವರು ಪೊಲೀಸರಿಗೆ ಕರೆ ಮಾಡಿದ್ದರು. ಆದಾಗ್ಯೂ ಪಿಎಸ್ಐ ಅವಿನಾಶ್ ಸೂಕ್ತ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ಮೆರೆದಿದ್ದರು ಎನ್ನಲಾಗಿದೆ.
ಆಂತರಿಕ ತನಿಖೆ ವೇಳೆ ಪಿಎಸ್ಐ ಅವಿನಾಶ್ ಕಾಂಬ್ಳೆ ನಿರ್ಲಕ್ಷ್ಯ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವಿನಾಶ್ ಕಾಂಬ್ಳೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.