ಬೆಂಗಳೂರು: ಡೇಟಿಂಗ್ ಆಪ್ ನಲ್ಲಿ ಪರಿಚಯವಾಗಿದ್ದ ಪುರುಷನ ವಿರುದ್ಧ ವಿವಾಹಿತೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ವ್ಯಕ್ತಿ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಅರ್ಜಿದಾರ ಮೊದಲನೇ ಮದುವೆಯಾಗಿದ್ದಾನೆ. ಆ ಮದುವೆ ಚಾಲ್ತಿಯಲ್ಲಿರುವಾಗ ಬೇರೆಯೊಬ್ಬರಿಗೆ ಮದುವೆಯ ಭರವಸೆ ನೀಡಲಾಗುವುದಿಲ್ಲ ಎಂದು ಹೇಳಿದೆ.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಮಹಿಳೆ ದೂರು ದಾಖಲಿಸುವಾಗ ಆಕೆಯ ಮದುವೆ ಚಾಲ್ತಿಯಲ್ಲಿತ್ತು. ಆದರೂ ಆಕೆ ತಾನು ವಿಚ್ಛೇದಿತಳೆಂದು ಹೇಳಿದ್ದಳು. ದಾಖಲೆಯ ಅನುಸಾರ ಇಬ್ಬರು ಒಮ್ಮತದಿಂದ ದೈಹಿಕ ಸಂಬಂಧ ಹೊಂದಿದ್ದರು. ಸಂಬಂಧ ಹದಗೆಟ್ಟ ನಂತರ ಈ ರೀತಿ ಆರೋಪ ಹೊರಿಸಿ ಅತ್ಯಾಚಾರ ಪ್ರಕರಣ ದಾಖಲಿಸಲಾಗದು. ಅಲ್ಲದೆ, ಮೊದಲನೇ ಮದುವೆ ಚಾಲ್ತಿಯಲ್ಲಿರುವಾಗ ಮತ್ತೆ ಮದುವೆಗೆ ಭರವಸೆ ನೀಡಲು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಮೇಲ್ನೋಟಕ್ಕೆ ಕಾನೂನಿನ ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದಿರುವ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.