33 ವರ್ಷ ವಯಸ್ಸಿನ ಶಿಕ್ಷಕಿಯೊಬ್ಬರು 15 ವರ್ಷದ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಹೇಳಿ ಸ್ನ್ಯಾಪ್‌ಚಾಟ್ ಮೂಲಕ ಹುಡುಗನೊಂದಿಗೆ ಸಂಭಾಷಣೆ ನಡೆಸಿದ್ದಾಳೆ. ಅಲ್ಲದೇ ಬಾಲಕನಿಗೆ ತನ್ನ ಬೆತ್ತಲೆ ವೀಡಿಯೊಗಳು ಮತ್ತು ಚಿತ್ರಗಳನ್ನು ಕಳುಹಿಸಿದ್ದಕ್ಕಾಗಿ UK ನ್ಯಾಯಾಲಯ ಶಿಕ್ಷಕಿಯನ್ನು ಈಗ ಜೈಲಿಗೆ ಕಳುಹಿಸಿದೆ.
ವೇಲ್ಸ್ ಆನ್‌ಲೈನ್ ಪ್ರಕಾರ , ಪ್ರಗತಿ ತರಬೇತುದಾರ ಮತ್ತು ಪೂರೈಕೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನಟಾಲಿ ಅರೋಯೊ ಇಂತಹ ಕೃತ್ಯವೆಸಗಿರುವ ಶಿಕ್ಷಕಿ. ಒಳಉಡುಪಿನಲ್ಲಿದ್ದ ತನ್ನ ಚಿತ್ರಗಳು ಮತ್ತು ವೀಡಿಯೋ ಕಳುಹಿಸಿದ್ದಲ್ಲದೇ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆತನನ್ನು ಪುಸಲಾಯಿಸಲು ಮುಂದಾಗಿದ್ದಳು.
ಅಪರಾಧ ಬೆಳಕಿಗೆ ಬಂದಿದ್ದು ಹೇಗೆ ?
ಹದಿಹರೆಯದವರೊಂದಿಗೆ ನಟಾಲಿಯಾ ಅರೋಯೊ ಮಾಡುತ್ತಿದ್ದ ಸಂಭಾಷಣೆಯ ಬಗ್ಗೆ ಓರ್ವ ವ್ಯಕ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆರಂಭದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನಿರಾಕರಿಸಿದ್ದಳು. ಹೆಚ್ಚಿನ ವಿಚಾರಣೆ ನಡೆಸಿದ ನಂತರ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾಳೆ.