alex Certify ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ |Vegetable Price Hike | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ |Vegetable Price Hike

ಬೆಂಗಳೂರು : ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎಂಬಂತೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.

ಹೌದು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ತರಕಾರಿ ಸಂಪೂರ್ಣ ಹಾಳಾಗಿದ್ದು, ತರಕಾರಿ ರೇಟ್ ಡಬಲ್ ಆಗಿದೆ.ಕೆಜಿಗೆ 30-40 ರೂ ಇದ್ದ ಟೊಮ್ಯಾಟೋ 70 ರೂವರೆಗೆ ಮಾರಾಟವಾಗುತ್ತಿದೆ. ಕ್ಯಾರೆಟ್ 80 ರೂ ಕೆಜಿಗೆ ಇದೆ. ಈರುಳ್ಳಿ 70-80 ರೂವರೆಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ಕೆಜಿಗೆ 400-500 ಇದೆ. ನುಗ್ಗೆಕಾಯಿ 400-500 ರೂ ವರೆಗೆ ಮಾರಾಟವಾಗುತ್ತಿದೆ.

ಫೆಂಗಲ್ ಚಂಡಮಾರುತದ ಪರಿಣಾಮ ಹೊರ ರಾಜ್ಯದಿಂದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ತರಕಾರಿ ರೇಟ್ ಡಬಲ್ ಆದ್ರೆ ಜನಸಾಮಾನ್ಯರು ಬದುಕುವುದು ಹೇಗೆ..? ಎಂಬ ಚಿಂತೆ ಜನರನ್ನು ಕಾಡುತ್ತಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...