ನಾಳೆ ಬಿಡುಗಡೆಯಾಗಲಿದೆ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಲಿರಿಕಲ್ ಹಾಡು 05-12-2024 3:00PM IST / No Comments / Posted In: Featured News, Live News, Entertainment ಯಾದವ್ ರಾಜ್ ನಿರ್ದೇಶನದ ಅಭಿಮನ್ಯು ಕಾಶಿನಾಥ್ ಅಭಿನಯದ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ‘ಸೃಷ್ಟಿ ದಾತಾ ಶಿವನೇ’ ಎಂಬ ಲಿರಿಕಲ್ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಚಿತ್ರವನ್ನು 7 crore ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಲ್ಲಿ ಕೇಟಿ ಮಂಜುನಾಥ್ ನಿರ್ಮಾಣ ಮಾಡಿದ್ದು, ಅಭಿಮನ್ಯು ಕಾಶೀನಾಥ್ ಅವರಿಗೆ ಜೋಡಿಯಾಗಿ ಅಪೂರ್ವ ಅಭಿನಯಿಸಿದ್ದಾರೆ. ಇನ್ನುಳಿದಂತೆ ಪ್ರನಾಥ್, ಪ್ರಣದ್ ಅಲ್ಲವಿ, ಬಿಲ್ಲು ಜಯರಾಮ್, ಖುಷಿ ಆಚಾರ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸಿದ್ದಾರ್ಥ್ ನಾಯಕ್ ಸಂಕಲನ, ಡಿಫರೆಂಟ್ ಡ್ಯಾನಿ – ದಿನೇಶ್ ಕಾಸಿ ಸಾಹಸ ನಿರ್ದೇಶನ, ಶ್ರೀನಿವಾಸ್ ಛಾಯಾಗ್ರಹಣ ಹಾಗೂ ರಾಜ್ ಕಿಶೋರ್ ನೃತ್ಯ ನಿರ್ದೇಶನವಿದೆ. View this post on Instagram A post shared by A2 Music (@a2musicsouth)