ದಕ್ಷಿಣ ಕನ್ನಡ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನೌಷದ್ ಮನೆ ಮೇಲೆ ಎನ್ ಐ ಎ (NIA) ದಾಳಿ ನಡೆಸಿದೆ.
ಐವರು ಎನ್ ಐ ಎ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೆಳ್ತಂಗಡಿಯ ಪಡಾಡಿಯಲ್ಲಿರುವ ನೌಷದ್ ಮನೆ ಮೇಲೆ ದಾಳಿ ನಡೆಸಿದೆ. ದಾಳಿ ವಿಚಾರ ಮೊದಲೇ ತಿಳಿದು ಮನೆ ಲಾಕ್ ಮಾಡಿ ನೌಷದ್ ಕುಟುಂಬದವರು ಪರಾರಿಯಾಗಿದ್ದಾರೆ.
ಬೆಳ್ತಂಗಡಿಯ ಇಬ್ಬರು ಪೊಲೀಸರ ಜೊತೆ NIA ದಾಳಿ ನಡೆಸಿದೆ. ಆರೋಪಿ ನೌಷದ್ ಪತ್ತೆಗೆ ಎನ್ ಐ ಎ 2 ಲಕ್ಷ ಬಹುಮಾನ ಘೋಷಿಸಿತ್ತು.