ಬೆಳಗಾವಿ : ಪ್ರೀತಿ ವಿರೋಧಿಸಿದ್ದಕ್ಕೆ ಯುವತಿಯ ತಾಯಿ ಹಾಗೂ ಸಹೋದರನ ಬರ್ಬರ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ನಡೆದಿದೆ.
ಯುವತಿಯ ತಾಯಿ ಹಾಗೂ ಯುವತಿಯ ಸಹೋದರನನ್ನು ರವಿ ಎಂಬಾತ ಬರ್ಬರವಾಗಿ ಕೊಂದಿದ್ದಾನೆ. ಮಂಗಲಾ ನಾಯಕ (45) ಪ್ರಜ್ವಲ್ ನಾಯಕ (18) ಕೊಲೆಯಾದ ದುರ್ದೈವಿಗಳು.ಮಂಗಲಾ ಪುತ್ರಿ ಪ್ರಾಜಕ್ತಾಳನ್ನು ರವಿ ಎಂಬಾತ ಪ್ರೀತಿ ಮಾಡುತ್ತಿದ್ದನು. ಇದಕ್ಕೆ ಪ್ರಾಜಕ್ತಾ ತಾಯಿ ಮಂಗಲಾ ವಿರೋಧಿಸಿದ್ದರು ಎನ್ನಲಾಗಿದೆ.
ಲವ್ ಮ್ಯಾರೇಜ್ ಗೆ ವಿರೋಧಿಸಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.ರವಿ ಹಾಗೂ ಪ್ರೇಯಸಿ ಪ್ರಾಜಕ್ತಾಳನ್ನು ಪೊಲೀಸರು ಬಂಧಿಸಿದ್ದು, ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.