ಬೆಂಗಳೂರು : ಆನ್ ಲೈನ್ ಗೇಮ್ ಹುಚ್ಚಿಗೆ ಯುವಕ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರವೀಣ್ ಎಂಬ ಯುವಕ ಆನ್ ಲೈನ್ ಗೇಮ್ ಆಟಕ್ಕೆ ಬಲಿಯಾಗಿದ್ದಾನೆ. ಆನ್ ಲೈನ್ ನಲ್ಲಿ ಆಟ ಆಡಲು ಹಲವು ಕಾಲ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಪ್ರವೀಣ್ ಸಾಲ ತೀರಿಸಲಾಗದೇ ಮೃತಪಟ್ಟಿದ್ದಾನೆ. 3 ದಿನದ ಹಿಂದೆ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ ನೀಡಿದವರು ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಹಾಗೂ ಆನ್ ಲೈನ್ ನಲ್ಲಿ ಗೆದ್ದ ಹಣವನ್ನು ಸಾಲಗಾರರು ಕಿತ್ತುಕೊಂಡಿದ್ದಕ್ಕೆ ಬೇಸತ್ತು ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.