ನಟ ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ವಿರುದ್ಧ ನೀಡಿದ ಸಾರ್ವಜನಿಕ ಹೇಳಿಕೆಯೊಂದು ಅವರ ನಟನಾ ವೃತ್ತಿ ಬದುಕಿಗೆ ಮುಳುವಾಗಿತ್ತು. ನಾನು ಮಾಡಿದ್ದು ತಪ್ಪು ಎಂದು ಅವರು ಪದೇ ಪದೇ ಒಪ್ಪಿಕೊಂಡರೂ ಸಲ್ಮಾನ್ ಖಾನ್ ಕ್ಷಮಿಸಲಿಲ್ಲ.
2009 ರ ಪ್ರಶಸ್ತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿವೇಕ್, ಸಲ್ಮಾನ್ ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರವೂ ಅವರ ನಡುವಿನ ಉದ್ವಿಗ್ನತೆ ಕಡಿಮೆಯಾಗಲಿಲ್ಲ. ಈ ಘಟನೆಯ ನಂತರ ವಿವೇಕ್ ಒಬೆರಾಯ್ ಅವರನ್ನು ಬಾಲಿವುಡ್‌ನಿಂದ ಪರೋಕ್ಷವಾಗಿ ನಿಷೇಧಿಸಲಾಯಿತು.
ಆದರೆ ವಿವೇಕ್ ಒಬೆರಾಯ್ ಇದರಿಂದ ಎದೆಗುಂದಲಿಲ್ಲ. ಅವರು ತಮ್ಮ ವೃತ್ತಿಜೀವನವನ್ನು ಚಲನಚಿತ್ರಗಳಿಂದ ವ್ಯಾಪಾರ ಕ್ಷೇತ್ರಕ್ಕೆ ಬದಲಾಯಿಸಿದರು. ವಿವೇಕ್ ವ್ಯಾಪಾರದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದು, ಮತ್ತು ಶೀಘ್ರದಲ್ಲೇ 1200 ಕೋಟಿ. ರೂ. ಗಳ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸಿದರು.
ವಿವೇಕ್ ಒಬೆರಾಯ್ ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ನೀಡಿದ್ದು, ತಮ್ಮ ವೃತ್ತಿಜೀವನದಲ್ಲಿ ʼಶೂಟೌಟ್ ಅಟ್ ಲೋಖಂಡವಾಲಾʼ ನಂತಹ ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಲ್ಲದೇ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ಇಷ್ಟಾದರೂ ಚಲನಚಿತ್ರಗಳಲ್ಲಿ ಅವಕಾಶ ಸಿಗಲಿಲ್ಲ ಎಂದಿದ್ದಾರೆ.
ವಿವೇಕ್ ಅವರು ಯಾವಾಗಲೂ ವ್ಯವಹಾರದಲ್ಲಿ ಆಸಕ್ತಿ ಹೊಂದಿದ್ದು, ಚಲನಚಿತ್ರಗಳಲ್ಲಿ ತಮಗೆ ಅವಕಾಶ ಕಡಿಮೆಯಾದಾಗ ತಮ್ಮ ಗಮನವನ್ನು ವ್ಯಾಪಾರದ ಮೇಲೆ ಕೇಂದ್ರೀಕರಿಸಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದರು.