ಕಾರ್ಯಕ್ರಮದ ವೇಳೆ ಮುಖ್ಯ ಅತಿಥಿ ಮೇಲೆ ಬಂದಿಳಿದ ಪಾಕಿಸ್ತಾನಿ ಪ್ಯಾರಾಗ್ಲೈಡರ್ | Viral Video

ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ಯಾರಾಗ್ಲೈಡರ್ ಹಠಾತ್ ಲ್ಯಾಂಡಿಂಗ್ ಮಾಡುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಈವೆಂಟ್‌ನ ಮುಖ್ಯ ಅತಿಥಿಯ ಮೇಲೆಯೇ ಇಳಿಯುವ ದೃಶ್ಯ ಇದರಲ್ಲಿ ಸೆರೆಯಾಗಿದೆ.

ಗ್ಲೈಡರ್ ತನ್ನ ಲ್ಯಾಂಡಿಂಗ್ ಸಮಯ ಮತ್ತು ವೇಗವನ್ನು ತಪ್ಪಾಗಿ ಅಂದಾಜು ಮಾಡಿದ ಕಾರಣಕ್ಕೆ ಮೈದಾನದ ಬದಲು ಅತಿಥಿಗಳು ಕುಳಿತಿದ್ದ ಮೊದಲ ಸಾಲಿನಲ್ಲಿ ನೇರವಾಗಿ ಇಳಿದಿದ್ದಾರೆ.

ಈ ವೇಳೆ ಹಲವರು, ಸುರಕ್ಷಿತ ಸ್ಥಳದತ್ತ ಓಡುತ್ತಿರುವುದನ್ನು ಕಾಣಬಹುದು. ಯಾರೂ ಗಾಯಗೊಂಡಂತೆ ತೋರುತ್ತಿಲ್ಲವಾದರೂ, ಗ್ಲೈಡರ್, ಹಾನಿಗೊಳಗಾದ ಪ್ಯಾರಾಚೂಟ್‌ನಲ್ಲಿ ಸಿಕ್ಕಿಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ʼದಿ ಖಲೀಜ್ ಟೈಮ್ಸ್ʼ ಪ್ರಕಾರ, ಈ ಘಟನೆಯು ನವೆಂಬರ್ 2023 ರಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್‌ನ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಭವಿಸಿತ್ತು ಎನ್ನಲಾಗಿದೆ. ವೀಡಿಯೊ 2,90,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಭಾರೀ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read