ಬೆಂಗಳೂರು: ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಬಾಣಂತಿಯರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಆಸ್ಪತ್ರೆಗಳಲ್ಲಿ ಬಳಸುವ IV ಫ್ಲೂಯಿಡ್ ಅಸುರಕ್ಷಿತ ಎಂಬ ಬಗ್ಗೆ ರಾಜ್ಯದ ಲ್ಯಾಬ್ ವರದಿಗಳು ಆತಂಕಕಾರಿ ಮಾಹಿತಿ ಬಹಿರಂಗಪಡಿಸಿವೆ. ಬಾಣಂತಿಯರ ಸರಣಿ ಸಾವು ಪ್ರಕರಣ ಸಂಬಂಧ ಐವಿ ಫ್ಲೂಯಿಡ್ ಟೆಸ್ಟ್ ವರದಿ ಬಂದಿದ್ದು, ಅದರಲ್ಲಿ 22 ಐವಿ ಫ್ಲೂಯಿಡ್ ಅಸುರಕ್ಷಿತ ಎಂದು ದೃಡವಾಗಿದೆ.
92 ಐವಿ ಫ್ಲೂಯಿಡ್ ಸ್ಯಾಂಪಲ್ಸ್ ಗಳ ವರದಿಯಲ್ಲಿ 22 ಅಸುರಕ್ಷಿತ ಎಂದು ತಿಳಿದುಬದಿದೆ. ಐವಿ ಫ್ಲೂಯಿಡ್ ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಲ್ ಅಂಶಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬಳಸುವ ಬಹುತೇಕ ಐವಿ ಫ್ಲೂಯಿಡ್ ಅಸುರಕ್ಷಿತ ಎಂದು ಹೇಳಲಾಗುತ್ತಿದೆ.
ಬಳ್ಳಾರಿ ಸೇರಿದಂತೆ ವಿವಿಧೆಡೆ ಬಾಣಂತಿಯರ ಸಾವಿಗೆ ಐವಿ ಫ್ಲೂಯಿಡ್ ನ ಅಸುರಕ್ಷಿತ ಅಂಶಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.