ಮೊನ್ನೆಯಷ್ಟೇ ನಡೆದ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡವಣ ಮೊದಲ ಟಿ 20 ಪದ್ಯದಲ್ಲಿ ಪಾಕಿಸ್ತಾನ ತಂಡ 57 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಶುಭಾರಂಭ ಮಾಡಿದೆ. ಇಂದು ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು, ಪಾಕಿಸ್ತಾನ ತಂಡ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಜಿಂಬಾಬ್ವೆ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಜಿಂಬಾಬ್ವೆ ತಂಡ ತನ್ನ ಓಂ ಗ್ರೌಂಡ್ ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದು, ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇಂದು ಗೆಲ್ಲಲೇಬೇಕಾದ ಅನಿವಾರ್ಯವಿದ್ದು, ಸರಣಿ ಸಮಬಲ ಮಾಡಿಕೊಳ್ಳಲಿದೆಯಾ, ಕಾದುನೋಡಬೇಕಾಗಿದೆ. ಒಟ್ಟಾರೆ ಮತ್ತೊಂದು ರೋಮಾಂಚನಕಾರಿ ಪಂದ್ಯಕ್ಕೆ ಜಿಂಬಾಬ್ವೆಯ ಬುಲವಾಯೊ ಕ್ರೀಡಾಂಗಣ ಸಜ್ಜಾಗಿದೆ.