ನೋಯಿಡಾದಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಡಿಸೆಂಬರ್ 24ರ ವರೆಗೆ ಪುಣೆಯಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ. ಇಂದು ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ.
ಬೆಂಗಳೂರು ಬುಲ್ಸ್ ಇದುವರೆಗೂ 15 ಪಂದ್ಯಗಳನ್ನಾಡಿದ್ದು, ಕೇವಲ ಎರಡು ಪದ್ಯದಲ್ಲಿ ಜಯ ಕಾಣುವ ಮೂಲಕ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ. ಇನ್ನು ಗುಜರಾತ್ ಜೈಂಟ್ಸ್ ತಂಡ ಕೂಡ ಈ ಬಾರಿ ಅಷ್ಟೇನೂ ಉತ್ತಮ ಪ್ರದರ್ಶನ ತೋರದೆ ಇರುವ ಕಾರಣ ಅಂಕಪಟ್ಟಿಯಲ್ಲಿ 11ನೇ ಸ್ಥಾನ ಕಾಯ್ದುಕೊಂಡಿದೆ. ಉಭಯ ತಂಡಗಳಿಗೂ ಸೆಮಿಫೈನಲ್ ಆದಿ ಕಠಿಣವಾಗಿದ್ದು, ಜಯದ ಹುಡುಕಾಟದಲ್ಲಿವೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಸಿಂಹದಮರಿ ಸೈನ್ಯ ಪುಣೆರಿ ಪಲ್ಟಾನ್ ತನ್ನ ಓಂ ಗ್ರೌಂಡ್ ನಲ್ಲಿ ಯು ಮುಂಬಾ ತಂಡವನ್ನು ಎದುರಿಸಲಿದೆ.