ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ ಪವನ್ ನಾರಾಯಣ್ ನಿರ್ದೇಶನದ ‘ನವಮಿ 9-9 1999’ ಚಿತ್ರದ ಟ್ರೈಲರ್ ಇಂದು ಜಾನಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಗೆ ಒಳ್ಳೆಯ ಪ್ರತಿಕ್ರಿಯೆಗಳು ದೊರೆತಿದ್ದು, ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ.
ಈ ಚಿತ್ರವನ್ನು ಪದ್ಮ ಸುಂದರಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಶಶಿಕುಮಾರ್ ನಿರ್ಮಾಣ ಮಾಡಿದ್ದು, ಯಶಸ್ ಅಭಿ ಸೇರಿದಂತೆ ನಂದಿನಿ ಗೌಡ, ಎಸ್. ನಾರಾಯಣ್, ಓಂಪ್ರಕಾಶ್ ರಾವ್, ಶಂಕರ್ ಅಶ್ವಥ್, ಹುಚ್ಚ ವೆಂಕಟ್, ನೇಹಾ ಪಾಟೀಲ್, ಸಂದೀಪ್, ಅನುಶ್ರೀ, ಕುರಿ ಸುನೀಲ್, ರಾಕೇಶ್ ಬಣ್ಣ ಹಚ್ಚಿದ್ದಾರೆ. ಭಾರ್ಗವ್ ಕೆಎಮ್ ಸಂಕಲನ, ಛಾಯಾಗ್ರಹಣ ಹಾಗೂ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ.