ನವದೆಹಲಿ: ಬಿಜೆಪಿ ಶಾಸಕ ಯತ್ನಾಳ್ ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ನನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ. ವಾಟ್ಸಪ್ ನಲ್ಲಿ ಬಂದ ನೋಟಿಸ್ ನ್ನು ಹೇಗೆ ನಂಬಲಿ? ಅದು ವಿಜಯೇಂದ್ರನೇ ಕಳುಹಿಸಿರುವ ನಕಲಿ ನೋಟಿಸ್ ಇರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಬಹಳ ಚಾಲೂ ಇದ್ದಾನೆ. ಈ ಹಿಂದೆ ಅವರ ಅಪ್ಪನ ಸಹಿ ಮಾಡಿ ಫೈಲ್ ಕ್ಲೀಯರ್ ಮಾಡಿದ್ದಾನೆ ಎಂದು ಹರಿಪ್ರಸಾದ್ ಈ ಬಗ್ಗೆ ಆರೋಪ ಮಾಡಿದ್ದರು. ಹಿಗಿರುವಾಗ ಈಗ ಡೂಪ್ಲಿಕೇಟ್ ನೋಟಿಸ್ ಕಳುಹಿಸಿರಬಹುದು. ಇದಕ್ಕೆಲ್ಲ ನಾನು ಹೆದರುವವನಲ್ಲ ಎಂದರು.
ಇನ್ನು ನೋಟಿಸ್ ನೀಡಿದರೆ ನನ್ನ ಉತ್ತರ ರೆಡಿ ಇದೆ. ಹತ್ತು ದಿನಗಳ ಕಾಲವಾಕಶ ನನಗೆ ಅಗತ್ಯವಿಲ್ಲ. ನನ್ನ ಹೋರಾಟ ನ್ಯಾಯಯುತವಾಗಿದೆ ಎಂದು ಹೇಳಿದರು.