ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯ ಸಂಸತ್ ಸಂಕೀರ್ಣದ ಗ್ರಂಥಾಲಯದಲ್ಲಿ ಹಿಂದಿ ಚಲನಚಿತ್ರ ‘ದಿ ಸಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ.
ಫೆಬ್ರವರಿ 27, 2002 ರಂದು ನಡೆದ ಗೋಧ್ರಾ ರೈಲು ದಹನ ಘಟನೆಯನ್ನು ಆಧರಿಸಿದ ಈ ಚಿತ್ರದಲ್ಲಿ ನಟರಾದ ವಿಕ್ರಾಂತ್ ಮಾಸ್ಸೆ, ರಿಧಿ ಡೋಗ್ರಾ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರದಲ್ಲಿದ್ದಾರೆ. 59 ಜನರು ಸಾವಿಗೀಡಾದ ಗೋದ್ರಾ ರೈಲು ದುರಂತದ ಘಟನೆಯು ಗುಜರಾತ್‌ನಲ್ಲಿ ಕೋಮುಗಲಭೆಗಳನ್ನು ಹೇಗೆ ಪ್ರಚೋದಿಸಿತು ಮತ್ತು 1,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆಯಿತು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಮೋದಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಶ್ರೀ ಮಾಸ್ಸೆ ಮತ್ತು ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಅವರು ಸಹ ಪ್ರಧಾನಿ ಮೋದಿಯವರೊಂದಿಗೆ ಬಾಲಯೋಗಿ ಆಡಿಟೋರಿಯಂನಲ್ಲಿ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ.
ಕಳೆದ ತಿಂಗಳು ಚಿತ್ರ ಬಿಡುಗಡೆಯ ನಂತರ ಮಾತನಾಡಿದ್ದ ಪ್ರಧಾನಿ ಮೋದಿ, ಸತ್ಯಗಳು ಹೊರಬರುವ ಮೊದಲು ನಕಲಿ ನಿರೂಪಣೆ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ, ಸತ್ಯವನ್ನು ಶಾಶ್ವತವಾಗಿ ಕತ್ತಲೆಯಲ್ಲಿ ಮರೆಮಾಡಲು ಸಾಧ್ಯವಿಲ್ಲ ಎಂದಿದ್ದರು.