alex Certify ಸುಂಕ ಕಟ್ಟುವ ವೇಳೆ 5 ನಿಮಿಷ ವ್ಯತ್ಯಾಸ; ಬಿಲ್ ನಲ್ಲಿ ಬಂತು ಲಕ್ಷ ಲಕ್ಷ ದಂಡದ ಮೊತ್ತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂಕ ಕಟ್ಟುವ ವೇಳೆ 5 ನಿಮಿಷ ವ್ಯತ್ಯಾಸ; ಬಿಲ್ ನಲ್ಲಿ ಬಂತು ಲಕ್ಷ ಲಕ್ಷ ದಂಡದ ಮೊತ್ತ…!

ಡರ್ಬಿಯ ಪಾರ್ಕಿಂಗ್ ಪ್ರದೇಶವೊಂದರಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಸುಂಕ ಪಾವತಿಸಲು 5 ನಿಮಿಷಕ್ಕಿಂತ ಹೆಚ್ಚು ಕಾಲ ಸಮಯ ತೆಗೆದುಕೊಂಡರೆಂದು ಮಹಿಳೆಗೆ 2 ಲಕ್ಷದ 5 ಸಾವಿರ ರೂಪಾಯಿ ಬಿಲ್ ಬಂದಿದೆ.

ರೋಸಿ ಹಡ್ಸನ್ ಎಂಬ ಮಹಿಳೆ ತನ್ನ ವಾಹನವನ್ನು ಎಕ್ಸೆಲ್ ಪಾರ್ಕಿಂಗ್ ಲಿಮಿಟೆಡ್ ಸೈಟ್‌ನಲ್ಲಿ ನಿಲ್ಲಿಸಿದಾಗ ಪ್ರತಿ ಬಾರಿಯೂ ಸಂಪೂರ್ಣ ಸುಂಕವನ್ನು ಪಾವತಿಸಿದ್ದರು. ಆದರೆ ಕೆಟ್ಟ ಸಿಗ್ನಲ್ ಸೇವೆಯ ಕಾರಣದಿಂದಾಗಿ ಫೋನ್ ನಲ್ಲಿ ಹಣ ಸಂದಾಯ ಮಾಡಲು ಫೋನ್ ಅನ್ನು ಸಂಪರ್ಕಿಸಬಹುದಾದ ನೆಟ್ ವರ್ಕ್ ಸಿಗುವ ಸ್ಥಳಕ್ಕೆ ನಡೆದುಕೊಂಡು ಹೋಗಿದ್ದು ಹೆಚ್ಚು ಸಮಯ ತೆಗೆದುಕೊಂಡರೆಂದು ಇಷ್ಟೊಂದು ಮೊತ್ತದ ಬಿಲ್ ಬಂದಿದೆ.

ಇದರ ಹೊರತಾಗಿಯೂ ಕಂಪನಿಯು ಆಕೆಗೆ 10 ಪಾರ್ಕಿಂಗ್ ಚಾರ್ಜ್ ನೋಟಿಸ್‌ಗಳನ್ನು (PCN ಗಳು) ಕಳುಹಿಸಿ ಕೋಪ್‌ಲ್ಯಾಂಡ್ ಸ್ಟ್ರೀಟ್‌ನಲ್ಲಿ ಸುಂಕ ಕಟ್ಟಲು ಅವರು ಗರಿಷ್ಠ ಐದು ನಿಮಿಷಗಳ ಅವಧಿಯನ್ನು ಮೀರಿದ್ದಾರೆ ಎಂದು ವಾದಿಸಿದೆ.
BBC ಗೆ ನೀಡಿದ ಹೇಳಿಕೆಯಲ್ಲಿ ಕಾರ್ ಪಾರ್ಕ್ ನಿರ್ವಾಹಕರು, ಮಹಿಳೆ ಕಂಪನಿಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದು ಅದು ಅವರ ದುರದೃಷ್ಟ ಎಂದು ಹೇಳಿದ್ದಾರೆ.

ಮಹಿಳೆ ಫೆಬ್ರವರಿ 2023 ರಲ್ಲಿ ಕಾರ್ ಪಾರ್ಕ್ ಅನ್ನು ಬಳಸಲು ಪ್ರಾರಂಭಿಸಿದ್ದರು. ಪಾರ್ಕಿಂಗ್ ಯಂತ್ರವು ಸರಿಯಾಗಿಲ್ಲ ಎಂದು ಗೊತ್ತಾದ ನಂತರ ಅವರು ಫೋನ್ ಅಪ್ಲಿಕೇಶನ್ ಬಳಸಿ ಹಣ ಪಾವತಿಸಲು ಪ್ರಯತ್ನಿಸಿದರು. ಆದರೆ ಸರಿಯಾಗಿ ಸಿಗ್ನಲ್ ಸಿಗದ ಕಾರಣ ಹತ್ತಿರದ ಡರ್ಬಿಯಾನ್ ಕೇಂದ್ರದ ಅಂಗಡಿಯಲ್ಲಿ ವೈಫೈ ಬಳಸಿ ಪ್ರತಿದಿನ 355 ರೂಪಾಯಿ ಪಾವತಿದ್ದರು. ಆದಾಗ್ಯೂ ಅವರಿಗೆ 28 ದಿನದೊಳಗಾಗಿ 6461 ರೂಪಾಯಿ ಪಾವತಿಸುವಂತೆ PCN ಪತ್ರ ಬಂದಿತ್ತು.

ಪರಿಸ್ಥಿತಿಯನ್ನು ವಿವರಿಸಲು ಕಂಪನಿಗೆ ಕರೆ ಮಾಡಿದರೆ ಕಂಪನಿಯವರು ಬಿಲ್ ಪಾವತಿಸಲೇಬೇಕೆಂದು ಹೇಳಿದ್ದಾರೆ. ನಂತರ ಮಹಿಳೆ ಪ್ರತಿ ಬಿಲ್ ನಲ್ಲೂ 10768 ರೂಪಾಯಿ ಪಾವತಿಸುವಂತೆ ಮತ್ತೆ ಒಂಭತ್ತು PCN ಗಳನ್ನು ಪಡೆದರು. ಇದರಲ್ಲಿ ಸಾಲ ವಸೂಲಾತಿ ಶುಲ್ಕ, ವಾರ್ಷಿಕ ಬಡ್ಡಿದರ ಮತ್ತು ಕಾನೂನು ಪ್ರತಿನಿಧಿಯ ವೆಚ್ಚ ಹಾಗು ನ್ಯಾಯಾಲಯದ ಶುಲ್ಕವನ್ನು ಸೇರಿಸಲಾಗಿತ್ತು.

ಸುಂಕ ಪಾವತಿಸಲು ಕೇವಲ 5 ನಿಮಿಷದ ವ್ಯತ್ಯಾಸದಿಂದ ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸಲು ಕೇಳಿರುವುದು ಅಸಮಂಜಸವೆಂದು ಆರೋಪಿಸಿರುವ ಮಹಿಳೆ ತನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ ಎಂದು ನಂಬಿದ್ದಾರೆ.

ಆದರೆ ಕಂಪನಿ ಪ್ರಕಾರ , ಕಾರ್ ಪಾರ್ಕ್‌ನಲ್ಲಿನ ಸೂಚನಾ ಫಲಕವು ‘ಪೇ ಆನ್ ಎಂಟ್ರಿ’ ಮತ್ತು ಪಾರ್ಕಿಂಗ್ ಸುಂಕವನ್ನು ಖರೀದಿಸಲು ಗರಿಷ್ಠ ಐದು ನಿಮಿಷಗಳ ಕಾಲಾವಕಾಶವಿದೆ ಎಂದು ಸ್ಪಷ್ಟಪಡಿಸಿದೆ.ಇದು ಕಾರ್ ಪಾರ್ಕ್‌ನ ಬಳಕೆಗೆ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳಲ್ಲಿ ಒಂದಾಗಿದೆ. ನಿಯಮಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಚಾಲಕನ ಜವಾಬ್ದಾರಿಯಾಗಿದೆ ಎಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...