ಬೆಂಗಳೂರು: ಒನ್ ಟೈಮ್ ಸೆಟಲ್ಮೆಂಟ್(ಒಟಿಎಸ್) ಜಾರಿಯಾದ ನಂತರ ಬಿಬಿಎಂಪಿಗೆ ದಾಖಲೆಯ 4,284 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ.
ಮೊದಲ ಬಾರಿಗೆ ಆಸ್ತಿ ತೆರಿಗೆ ಸಂಗ್ರಹ 4200 ಕೋಟಿ ರೂಪಾಯಿ ದಾಟಿದೆ. ಒಟಿಎಸ್ ಬಾಬ್ತಿನಿಂದ 700 ಕೋಟಿ ಸಂಗ್ರಹವಾಗಿದ್ದು, ಇನ್ನೊಂದು ವಾರದಲ್ಲಿ ಅಧಿಕೃತ ಅಂಕಿ ಅಂಶಗಳು ಹೊರ ಬೀಳಲಿವೆ.
2024 -25 ನೇ ಸಾಲಿನಲ್ಲಿ 5200 ಕೋಟಿ ರೂ. ಸಂಗ್ರಹಿಸುವ ಗುರಿ ಇತ್ತು. ಒಂದೇ ವರ್ಷ 4284 ಕೋಟಿ ರೂಪಾಯಿ ವಸೂಲು ಮಾಡಿರುವುದು ಇದೇ ಮೊದಲ ಬಾರಿಯಾಗಿದೆ. ಇದು ಪಾಲಿಕೆಯಲ್ಲಿ ಈವರೆಗಿನ ಅತ್ಯಧಿಕ ತೆರಿಗೆ ಸಂಗ್ರಹ ಮೊತ್ತವಾಗಿದೆ. ಹಿಂದಿನ ಸಾಲಿನಲ್ಲಿ 4100 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು ಎನ್ನಲಾಗಿದೆ.