ಇಂದು ಇನ್ಸ್ಟಾ ಲೈವ್ ನಲ್ಲಿ ಬರಲಿದೆ ‘ನಾ ನಿನ್ನ ಬಿಡಲಾರೆ’ ಚಿತ್ರತಂಡ 01-12-2024 12:53PM IST / No Comments / Posted In: Featured News, Live News, Entertainment ಹಾರರ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ನಾ ನಿನ್ನ ಬಿಡಲಾರೆ’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ನವೆಂಬರ್ 29ರಂದು ಬಿಡುಗಡೆಯಾಗಿದ್ದ ಈ ಚಿತ್ರ ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರತಂಡ ಇಂದು ಮಧ್ಯಾಹ್ನ 1:00 ಗಂಟೆಗೆ ಇನ್ಸ್ಟಾ ಲೈವ್ ನಲ್ಲಿ ಬರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ನವೀನ್ ಜಿಎಸ್ ನಿದೇಶಿಸಿರುವ ಈ ಚಿತ್ರದಲ್ಲಿ ಅಂಬಲಿ ಭಾರತಿ ಸೇರಿದಂತೆ ಪಂಚಿ, ಕೆ ಎಸ್ ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಸೀರುಂಡೆ ರಘು, ಮಹಾಂತೇಶ್, ಲಕ್ಷ್ಮಿ ಸಿದ್ದಯ್ಯ, ಮಂಜುಳಾ ರೆಡ್ಡಿ, ನಾಗರಾಜ್ ರಾವ್ ಬಣ್ಣ ಹಚ್ಚಿದ್ದು, ಕಮಲ ಉಮಾ ಭಾರತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಭಾರತಿ ಬಾಲಿ ನಿರ್ಮಾಣ ಮಾಡಿದ್ದಾರೆ. ದೀಪಕ್ ಸಿಎಸ್ ಸಂಕಲನ, ಹಾಗೂ ವೀರೇಶ್ ಎಸ್ ಛಾಯಾಗ್ರಹಣವಿದೆ. View this post on Instagram A post shared by Kannadapichhar (@kannada_pichhar)