ಸಾರ್ವಜನಿಕರಿಗೆ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಮಹತ್ವದ ಪ್ರಕಟಣೆ.!

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪಾವತಿಸುವ ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಶುಲ್ಕ, ಎಸ್ಡಬ್ಲೂö್ಯಎಂ ಶುಲ್ಕ, ನಮೂನೆ-2 ಶುಲ್ಕ, ಹಕ್ಕು ಬದಲಾವಣೆ ಶುಲ್ಕ, ಉದ್ದಿಮೆ ಪರವಾನಿಗೆ/ನವೀಕರಣ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ಜನನ-ಮರಣ ಪ್ರಮಾಣ ಪತ್ರ ಶುಲ್ಕ ಹಾಗೂ ಇತ್ಯಾದಿ ಶುಲ್ಕಗಳನ್ನು ಪಾವತಿಸುವಾಗ ವಲಯ ಅಥವಾ ಪಾಲಿಕೆಯ ನೌಕರರಿಂದ ಪಡೆದ ರಶೀದಿ, ಚಲನ್ಗಳ ನೈಜತೆಯನ್ನು ‘ಬಳ್ಳಾರಿ ಒನ್’ ಮತ್ತು ಮಹಾನಗರ ಪಾಲಿಕೆಯ ಲೆಕ್ಕ ಶಾಖೆಯಿಂದ ದೃಢೀಕರಣಗೊಳಿಸಿಕೊಳ್ಳಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯು ತಿಳಿಸಿದೆ.

ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ ಹಾಗೂ ಇನ್ನೀತರೆ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿದಲ್ಲಿ ನಗರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read