ಬೆಂಗಳೂರು : ಸಿದ್ದರಾಮಯ್ಯ CM ಆಗಿ 5 ವರ್ಷ ಇರ್ತಾರೋ, ಇರಲ್ವೋ ಗೊತ್ತಿಲ್ಲ ಎಂದು ಸಿಎಂ ಆಪ್ತ ಸಲಹೆಗಾರ, ಕಾಂಗ್ರೆಸ್ ಶಾಸಕ ಬಿ. ಆರ್ ಪಾಟೀಲ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ 5 ವರ್ಷ ಇರಬೇಕು ಅಂತ ನಾವು ಬಯಸುತ್ತೇವೆ, ಆದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ನಾವೇನು ಮಾಡಬೇಕಾಗುತ್ತದೆ. ಸಿದ್ದರಾಮಯ್ಯಗೆ ಇನ್ನೂ ದೊಡ್ಡ ಜವಾಬ್ದಾರಿ ಕೊಡಬಹುದು ಎಂದು ಬಿ.ಆರ್ ಪಾಟೀಲ್ ಅಚ್ಚರಿ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಬಿ. ಆರ್ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ CM ಆಗಿ 5 ವರ್ಷ ಇರ್ತಾರೋ, ಇರಲ್ವೋ ಗೊತ್ತಿಲ್ಲ. ಅವರಿಗೆ ಹೈಕಮಾಂಡ್ ಇನ್ನೂ ದೊಡ್ಡ ಜವಾಬ್ದಾರಿ ಕೊಡಬಹುದು..ಯಾರಿಗೆ ಗೊತ್ತು..! ಅವರು ಸಿಎಂ ಆಗಿ 5 ವರ್ಷ ಇರಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.