‌ʼಬ್ಯಾಲೆಟ್ʼ ಮೂಲಕ ನಡೆಸುವ ಚುನಾವಣೆಯಲ್ಲಿ ಮೋದಿ ಗೆದ್ದರೆ ಮುಂದಿನ 20 ವರ್ಷ ರಾಜಕೀಯ ನಿವೃತ್ತಿ; ನಟಿ ಸ್ವರಾ ಭಾಸ್ಕರ್‌ ಪತಿ ಘೋಷಣೆ

ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಅನುಶಕ್ತಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎನ್‌ಸಿಪಿ-ಎಸ್‌ಪಿ ನಾಯಕಿ ಮತ್ತು ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹ್ಮದ್ ಸೋಲನ್ನಪ್ಪಿದ್ದಾರೆ. ತಾವು ಚುನಾವಣೆಯಲ್ಲಿ ಪರಾಭವಗೊಳ್ಳಲು ಮತಯಂತ್ರದಲ್ಲಿನ ಮೋಸವೇ ಕಾರಣ ಎಂದು ಆರೋಪಿಸುತ್ತಿರುವ ಇದೀಗ, ಪ್ರಧಾನಿ ನರೇಂದ್ರ ಮೋದಿಯವರು ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಚುನಾವಣೆಯಲ್ಲಿ ಗೆದ್ದರೆ ಮುಂದಿನ 20 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಚುನಾವಣಾ ಪಾರದರ್ಶಕತೆಯ ಕುರಿತ ಚರ್ಚೆಯಲ್ಲಿ ತನಗೆ ಸವಾಲು ಹಾಕಿದ X ನಲ್ಲಿನ ಬಳಕೆದಾರರಿಗೆ ಪ್ರತಿಕ್ರಿಯೆಯಾಗಿ ಅಹ್ಮದ್ ಅವರ ಕಾಮೆಂಟ್ ಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಫಹಾದ್ ಅಹ್ಮದ್, ಮತಯಂತ್ರಗಳ ಪರಿಶೀಲನೆಗೆ ವಿನಂತಿಸುವ ಫಾರ್ಮ್‌ನ ಚಿತ್ರವನ್ನು ಹಂಚಿಕೊಂಡಿದ್ದು, “ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಕಾಪಾಡಲು. ನಾನು 2 CU/BU/VVPAT ಬೂತ್‌ನ ಪರಿಶೀಲನೆಗಾಗಿ ವಿನಂತಿಯನ್ನು ಭರ್ತಿ ಮಾಡಿದ್ದೇನೆ. ಇದಕ್ಕಾಗಿ ECI 47,200 ರೂ.ಗಳನ್ನು ವಿಧಿಸುತ್ತಿದ್ದು, ನಾನು 13 ಬೂತ್‌ಗಳಿಗೆ ಅರ್ಜಿ ಸಲ್ಲಿಸುತ್ತೇನೆ” ಎಂದಿದ್ದಾರೆ.

ಪ್ರತಿಕ್ರಿಯೆಯಾಗಿ, ಕೇದರ್ ಎಂಬ X ಬಳಕೆದಾರರು ಎಲ್ಲಾ 13 ಬೂತ್‌ಗಳಿಗೆ ಪರಿಶೀಲನಾ ವೆಚ್ಚವನ್ನು ನಾನು ಭರಿಸುತ್ತೇನೆ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ಈ ಮೊತ್ತ ಗಿಫ್ಟ್‌ ಎಂದು ತಿಳಿದುಕೊಳ್ಳಿ. ಆದಾಗ್ಯೂ, ಯಾವುದೇ ಸಮಸ್ಯೆಗಳು ಪತ್ತೆಯಾಗದಿದ್ದರೆ, ಫಹಾದ್ 25 ಲಕ್ಷ ರೂಪಾಯಿಗಳ ಜೊತೆಗೆ ಪರಿಶೀಲನಾ ವೆಚ್ಚದ ಮೊತ್ತವನ್ನು ಹಿಂದಿರುಗಿಸಬೇಕಾಗುತ್ತದೆ. ಕಾನೂನುಬದ್ಧವಾಗಿ ಒಪ್ಪಂದದ ಮೂಲಕ ಇದನ್ನು ಔಪಚಾರಿಕಗೊಳಿಸಿಕೊಳ್ಳೋಣ ಎಂದಿದ್ದರು.

ಇದಕ್ಕೆ ಕಟುವಾಗಿ ಉತ್ತರಿಸಿದ ಅಹ್ಮದ್, ‘ನಿಮ್ಮ ನರೇಂದ್ರ ಮೋದಿಯವರಿಗೆ ಬ್ಯಾಲೆಟ್‌ ಮೂಲಕ ಮೂಲಕ ಚುನಾವಣೆ ನಡೆಸುವಂತೆ ಹೇಳಿ, ಇದರಲ್ಲಿ ಅವರು ಗೆದ್ದರೆ ನಾನು 20 ವರ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲʼ ಎಂದು ಸವಾಲು ಹಾಕಿದ್ದಾರೆ.

ಇತ್ತೀಚಿನ ಚುನಾವಣೆಯಲ್ಲಿ, ಎನ್‌ಸಿಪಿಯ ಶರದ್ ಪವಾರ್ ಅವರ ಬಣದಿಂದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಫಹಾದ್ ಅಹ್ಮದ್, ಅಜಿತ್ ಪವಾರ್ ನೇತೃತ್ವದ ಪ್ರತಿಸ್ಪರ್ಧಿ ಎನ್‌ಸಿಪಿ ಬಣದ ಅಭ್ಯರ್ಥಿ ಸನಾ ಮಲಿಕ್ ಅವರ ವಿರುದ್ದ ಪರಾಭವಗೊಂಡಿದ್ದರು. ಸೋಲಿನ ಅಂತರ 3,378 ಮತಗಳು. ಅಹ್ಮದ್ ಅವರು ಈ ಹಿಂದೆ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷದಲ್ಲಿ ಯುವ ನಾಯಕರಾಗಿದ್ದು, ಆದರೆ ಚುನಾವಣೆಗೆ ಸ್ವಲ್ಪ ಮೊದಲು ಶರದ್ ಪವಾರ್ ಅವರ ಪಕ್ಷಕ್ಕೆ ನಿಷ್ಠೆಯನ್ನು ಬದಲಾಯಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read