HomeIndiaBIG NEWS : ‘ಆ್ಯಕ್ಸಿಡೆಂಟ್’ ಸಿನಿಮಾ ಶೈಲಿಯಲ್ಲಿ ಭೀಕರ ಅಪಘಾತ ; ಐವರು ಸ್ಥಳದಲ್ಲೇ ದುರ್ಮರಣ.!

BIG NEWS : ‘ಆ್ಯಕ್ಸಿಡೆಂಟ್’ ಸಿನಿಮಾ ಶೈಲಿಯಲ್ಲಿ ಭೀಕರ ಅಪಘಾತ ; ಐವರು ಸ್ಥಳದಲ್ಲೇ ದುರ್ಮರಣ.!

ರಸ್ತೆಬದಿ ಮಲಗಿದ್ದವರ ಮೇಲೆ ಟಿಂಬರ್ ಲಾರಿ ಹರುದು ಹೋದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ನಾಟಿಕಾದಲ್ಲಿ ನಡೆದಿದೆ.

ಭೀಕರ ಅಪಘಾತದಲ್ಲಿ ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳಿಯಪ್ಪನ (50), ಜಿವನ್ (4) ನಾಗಮ್ಮ (39), ಬೆಂಗಾರಿ (20) ಹಾಗೂ ಒಂದೂವರೆವರ್ಷದ ಮಗ ಸೇರಿ ಐವರು ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ತ್ರಿಶೂರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಅಲೆಮಾರಿ ಸಮುದಾಯದವರು. ರಾಷ್ಟ್ರೂಈಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿತ್ತು. ರಸ್ತೆ ಬಂದ್ ಆಗಿರುವುದರಿಂದ ವಾಹನ ಸಂಚಾರವಿರಲ್ಲ ಎಂದು ರಸ್ತೆ ಮೇಲೆ ಎಂಟ್ ಹಾಕಿ ಮಲಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ವೇಗವಾಗಿ ಬಂದ ಲಾರಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು, ಜನರು ಮಲಗಿದ್ದ ರಸ್ತೆಗೆ ನುಗ್ಗಿ, ದುರಂತ ಸಂಭವಿಸಿದೆ. ಘಟನೆ ಬಳಿಕ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಲು ಯತ್ನಿಸಿದ್ದರು. ಸ್ಥಳೀಯರು ತಕ್ಷಣ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಣ್ಣೂರು ಮೂಲದ ಚಾಲಕ ಜೋಶ್ ಹಾಗೂ ಕ್ಲೀನರ್ ಅಲೆಕ್ಸ್ ಬಂಧಿತರು.

 

For Latest News Updates, Join Our Whatsapp Community🚩
RELATED ARTICLES

Most Popular