HomeKarnatakaಬೈ-ಎಲೆಕ್ಷನ್ ಸೋಲಿನ ಬೆನ್ನಲ್ಲೇ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದ ಬಿ.ವೈ ವಿಜಯೇಂದ್ರ.!

ಬೈ-ಎಲೆಕ್ಷನ್ ಸೋಲಿನ ಬೆನ್ನಲ್ಲೇ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದ ಬಿ.ವೈ ವಿಜಯೇಂದ್ರ.!

ಬೆಂಗಳೂರು : ಬೈ ಎಲೆಕ್ಷನ್ ಸೋಲಿನ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಬಿವೈ ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಹಾಗೂ ಇದನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಹೃದಯ ಕಾರ್ಯಕರ್ತ ಬಂಧುಗಳೇ, ಉಪ ಚುನಾವಣೆಗಳ ಫಲಿತಾಂಶ ಸಂಘಟನಾ ಶಕ್ತಿಯನ್ನು ಅಳೆಯುವ ಅಳತೆಗೋಲಲ್ಲ, ಭವಿಷ್ಯತ್ತಿನಲ್ಲಿ ಸಂಘಟನೆಯನ್ನು ಬಲ ವೃದ್ಧಿಗೊಳಿಸಲು ನಮ್ಮ ಮುಂದಿರುವ ಸವಾಲುಗಳನ್ನು ನೆನಪಿಸುವ ಸಂಕೇತವಾಗಿದೆ ಎಂದಿದ್ದಾರೆ.

ಸಹೃದಯ ಕಾರ್ಯಕರ್ತ ಬಂಧುಗಳೇ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ.

ಸದ್ಯ ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯ, ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ, ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ.

ಭಾರತೀಯ ಜನತಾ ಪಾರ್ಟಿ ಅಧಿಕಾರದ ಬೆನ್ನು ಹತ್ತಿ ರಾಜಕಾರಣ ಮಾಡುವುದಕ್ಕಾಗಿ ಜನ್ಮ ತಾಳಿದ್ದಲ್ಲ. ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯ ಪ್ರತಿ ಹಂತವೂ ಚಾರಿತ್ರಿಕ ದಾಖಲೆಗಳಾಗಿವೆ. ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆಪಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದು ಕೊಟ್ಟ ರಾಜ್ಯ ‘ಕರ್ನಾಟಕ’ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದೊಂದಿಗೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿಕೊಂಡು ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುವಂತಾಗಲು ಕಾರಣವಾಗಿದೆ. ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬ್ಯಾಂಕಿನ ಖಾತೆಗೆ ಖನ್ನ ಹಾಕಿ ಲಪಟಾಯಿಸಿದ ಪ್ರಕರಣವೂ ದೇಶದ ಇತಿಹಾಸದಲ್ಲಿಯೇ ಮೊದಲು. ವಕ್ಸ್ ಕಾಯ್ದೆ ಹೆಸರಿನಲ್ಲಿ ರೈತರು, ಮಠಮಾನ್ಯಗಳು ಹಾಗೂ ದೇವಸ್ಥಾನಗಳ ಆಸ್ತಿ ಆಕ್ರಮಿಸಲು ಕಠೋರ ನಿಲುವಿನ ಅಸ್ತ್ರ ಬಳಸಿದ್ದು ಇದೇ ಮೊದಲು. ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಕಡು ಬಡವರ ಅನ್ನದ ತಟ್ಟೆಯನ್ನು ನಿರ್ದಯವಾಗಿ ಈ ಸರ್ಕಾರ ಕಿತ್ತುಕೊಳ್ಳಲು ಹೊರಟಿದ್ದೇಕೆ ?

ತಾವು ತಪ್ಪೇ ಮಾಡದಿದ್ದರೆ, ಅಕ್ರಮವಾಗಿ ನಿವೇಶನಗಳನ್ನು ಪಡೆಯದಿದ್ದರೆ 14 ನಿವೇಶನಗಳನ್ನು ಮುಡಾಗೆ ಒಪ್ಪಿಸಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಇಂದಿಗೂ ಜೀವಂತ. ಕಾನೂನು ವ್ಯವಸ್ಥೆಯಲ್ಲಿ ಇದು ತಾರ್ಕಿಕ ಅಂತ್ಯ ಕಾಣುವವರೆಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕೆಲವು ಮಂತ್ರಿಗಳು ಪ್ರಾಮಾಣಿಕತೆಯ ಮಾತನಾಡುವ ನೈತಿಕತೆ ಹೊಂದಲು ಸಾಧ್ಯವೇ ಇಲ್ಲ. ಹಣ ಬಲ, ಅಧಿಕಾರ ಬಲದ ಜೊತೆಗೆ ಚುನಾವಣೆಯ ಹಿಂದಿನ ದಿನವನ್ನು ಗುರಿಯನ್ನಾಗಿಸಿಕೊಂಡು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತದಾರರ ಖಾತೆಗೆ ಹಾಕಿದ್ದು ಚುನಾವಣೆಯ ಅನೈತಿಕತೆಯಲ್ಲದೇ ಮತ್ತಿನ್ನೇನು? ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ, ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನೆಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular