alex Certify ಮಹಾರಾಷ್ಟ್ರ ಚುನಾವಣೆ: ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ಚುನಾವಣೆ: ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು

ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಕನಸು ಭಗ್ನಗೊಂಡಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಂಡಿದೆ. ಪ್ರತಿಪಕ್ಷಗಳು ಸೇರಿ ಕೇವಲ 46 ಸ್ಥಾನಗಳನ್ನು ಪಡೆದಿವೆ. ಬಿಜೆಪಿ 132, ಶಿವಸೇನೆ 57, ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ನಿರ್ಣಾಯಕ ಚುನಾವಣೆಯ ಕುತೂಹಲಕಾರಿ ಅಂಶವೆಂದರೆ ಕೆಲವು ಸ್ಥಾನಗಳಲ್ಲಿ ನಿಕಟ ಹೋರಾಟವಾಗಿದ್ದು, ಮತಗಳ ಅಂತರವು 162 ಮತಗಳಿಗೆ ಇಳಿದಿದೆ. ರಾಜ್ಯದಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳ ಕುರಿತ ವಿವರ ಇಲ್ಲಿದೆ.

ಮುಫ್ತಿ ಮೊಹಮ್ಮದ್ ಖಾಲಿಕ್: ಎಐಎಂಐಎಂ ಅಭ್ಯರ್ಥಿ ಮಾಲೆಗಾಂವ್ ಸೆಂಟ್ರಲ್‌ನಲ್ಲಿ ಇಸ್ಲಾಂ ಪಕ್ಷದ ಆಸಿಫ್ ಶೇಖ್ ರಶೀದ್ ಅವರನ್ನು ಕೇವಲ 162 ಮತಗಳಿಂದ ಸೋಲಿಸಿದರು.

ನಾನಾ ಪಟೋಲೆ: ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ಸಕೋಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಅವಿನಾಶ್ ಅನಂರಾವ್ ಬ್ರಹ್ಮಣಕರ್ ವಿರುದ್ಧ ಕೇವಲ 208 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮಂದ ವಿಜಯ್ ಮ್ಹಾತ್ರೆ: ಬೇಲಾಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಬಿಜೆಪಿ ಅಭ್ಯರ್ಥಿ 377 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ನಾಯಕ ಸಂದೀಪ್ ಗಣೇಶ್ ನಾಯಕ್ ಅವರನ್ನು ಸೋಲಿಸಿದರು.

ಗಾಯಕ್ವಾಡ್ ಸಂಜಯ್ ರಾಂಭೌ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಗಾಯಕ್ವಾಡ್ ಅವರು ಠಾಕ್ರೆ ಬಣದ ಜಯಶ್ರೀ ಸುನಿಲ್ ಶೆಲ್ಕೆ ಅವರನ್ನು 841 ಮತಗಳ ಅಂತರದಿಂದ ಸೋಲಿಸಿ ಬುಲ್ಧಾನ ವಿಧಾನಸಭಾ ಸ್ಥಾನವನ್ನು ಭದ್ರಪಡಿಸಿಕೊಂಡರು.

ಶಿರೀಶ್‌ಕುಮಾರ್ ಸುರುಪ್ಸಿಂಗ್ ನಾಯ್ಕ್: ನವಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಶಿರೀಶಕುಮಾರ ಸುರೂಪ್‌ಸಿಂಗ್ ನಾಯ್ಕ್ 1,121 ಮತಗಳ ಅಂತರದಿಂದ ಸ್ವತಂತ್ರ ಅಭ್ಯರ್ಥಿ ಶರದ್ ಕೃಷ್ಣರಾವ್ ಗವಿತ್ ಅವರನ್ನು ಸೋಲಿಸಿದರು.

ರೋಹಿತ್ ಪವಾರ್: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಶರದ್ಚಂದ್ರ ಪವಾರ್) ಅಭ್ಯರ್ಥಿ ಕರ್ಜತ್ ಜಮಖೇಡ್ ವಿಧಾನಸಭಾ ಕ್ಷೇತ್ರದಲ್ಲಿ 1,243 ಮತಗಳಿಂದ ಗೆದ್ದಿದ್ದಾರೆ. ಅವರು ಮೊದಲಿಗೆ ಹಿಂದುಳಿದಿದ್ದರು. ಆದರೆ ನಂತರ ಬಿಜೆಪಿ ಅಭ್ಯರ್ಥಿ ರಾಮ್ ಶಂಕರ್ ಶಿಂಧೆ ಅವರನ್ನು ಸೋಲಿಸಿದರು. 2019ರಲ್ಲೂ ಪವಾರ್ ಗೆದ್ದಿದ್ದರು.

ಸಾಜಿದ್ ಖಾನ್ ಪಠಾಣ್: ಕಾಂಗ್ರೆಸ್ ನಾಯಕ ಪಠಾಣ್ ಅವರು ಅಕೋಲಾ ಪಶ್ಚಿಮ ಕ್ಷೇತ್ರದಲ್ಲಿ 1,283 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಅಗರವಾಲ್ ವಿಜಯ್ ಕಮಲಕಿಶೋರ್ ಅವರನ್ನು ಸೋಲಿಸುವ ಮೂಲಕ ಸ್ಥಾನ ಪಡೆದರು.

ಮಹೇಶ್ ಬಲಿರಾಮ್ ಸಾವಂತ್: ಶಿವಸೇನೆಯ ಹಾಲಿ ಶಾಸಕ ಸದಾ ಸರ್ವಾಂಕರ್ ಅವರನ್ನು 1,316 ಮತಗಳ ಅಂತರದಿಂದ ಸೋಲಿಸಿ ಶಿವಸೇನಾ(ಯುಬಿಟಿ) ಅಭ್ಯರ್ಥಿ ಮಹೇಶ್ ಬಲಿರಾಮ್ ಸಾವಂತ್ ಅವರು ಮಾಹಿಮ್ ವಿಧಾನಸಭಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾವಂತ್ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆ ಅವರನ್ನು ಈ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...