ಬೆಂಗಳೂರು: ಯುವಕನನ್ನು ಅಪಹರಿಸಿ ಹಣ, ಚಿನ್ನ ಸುಲಿಗೆ ಮಾಡಿದ್ದ 7 ಜನರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ಮೋನಿಕಾ, ಹರೀಶ್, ಹರೇಕೃಷ್ಣ, ನರೇಶ್, ರಾಜಕುಮಾರ್, ನರಸಿಂಹ ಆಂಜನೇಯ ಬಂಧಿತ ಆರೋಪಿಗಳು.
ಶಿವ ಎಂಬಾತ ಆಂಧ್ರದ ನೆಲ್ಲೂರಿನಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದು, ಸಂಬಂಧಿಯಾಗಿರುವ ಆರೋಪಿ ಮೋನಿಕಾಳನ್ನು ಪ್ರೀತಿಸುತ್ತಿದ್ದ. ಒಂದು ವರ್ಷದ ಹಿಂದೆ ಮೋನಿಕಾ ಶಿವನಿಂದ ದೂರವಾಗಿದ್ದಳು. ನವೆಂಬರ್ 17ರಂದು ಶಿವನಿಗೆ ಕರೆ ಮಾಡಿ ಭೇಟಿ ಮಾಡಲು ಪೆನಗೊಂಡಾಗೆ ಬರುವಂತೆ ಹೇಳಿದ್ದಳು. ಆದರೆಮ ಪೆನಗೊಂಡ ಬದಲು ಪಾವಗಢದಲ್ಲಿ ಮೋನಿಕಾಳನ್ನು ಶಿವ ಭೇಟಿಯಾಗಿದ್ದ.
ಇಬ್ಬರೂ ಪಾವಗಡದಲ್ಲಿ ಸುತ್ತಾಡುವಾಗ ನಾಲ್ವರು ಅಪಹರಣ ಮಾಡಿದ್ದರು. ನಂತರ ಪಾವಗಢದ ಮನೆಯಲ್ಲಿ ಕೂಡಿ ಹಾಕಿ ಆರು ಜನ ಶಿವನ ಮೇಲೆ ಹಲ್ಲೆ ನಡೆಸಿದ್ದರು. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದರು.
ಈ ವೇಳೆ ಮೋನಿಕಾಳನ್ನು ಆ ಮನೆಯಿಂದ ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಮತ್ತೆ ಶಿವನಿಗೆ 10 ಲಕ್ಷ ರೂಪಾಯಿ ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿದ್ದರು. ಕೊನೆಗೆ 5 ಲಕ್ಷ ನೀಡಲು ಒಪ್ಪಿಕೊಂಡ ಶಿವ ಸ್ನೇಹಿತರಿಂದ ಹಣ ಹಾಕಿಸಿಕೊಂಡಿದ್ದ. ಆದರೆ ಎಟಿಎಂ ಕಾರ್ಡ್ ಇಲ್ಲದ ಕಾರಣ ಕೋರಿಯರ್ ಮಾಡಿಸಿಕೊಂಡಿದ್ದರು.
ನಾಲ್ಕರಿಂದ ಐದು ಎಟಿಎಂ ಕಾರ್ಡುಗಳನ್ನು ಆರೋಪಿಗಳು ಮೆಜೆಸ್ಟಿಕ್ ಗೆ ಎಟಿಎಂ ಕಾರ್ಡ್ ಕೋರಿಯರ್ ಮಾಡಿಸಿಕೊಂಡಿದ್ದರು. ನವೆಂಬರ್ 20ರಂದು ಬೆಂಗಳೂರಿಗೆ ಕಾರಿನಲ್ಲಿ ಶಿವನ ಜೊತೆಗೆ ಆಗಮಿಸಿದ್ದರು. ನವೆಂಬರ್ 21ರಂದು ಸಂಜೆ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡಿದ್ದು, ಹಣದ ವಿಚಾರಕ್ಕೆ ಆರೋಪಿಗಳಾದ ಹರೀಶ್ ಮತ್ತು ಹರಿಕೃಷ್ಣ ನಡುವೆ ಗಲಾಟೆಯಾಗಿದೆ. ಈ ವೇಳೆ PSI ಮಾದೇಶ್ ಸ್ಥಳಕ್ಕೆ ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ 7 ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.