ನವದೆಹಲಿ: ಕೇರಳದ ವಯನಾಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಜಯಗಳಿಸಿದ್ದಾರೆ.
ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಪ್ರಿಯಾಂಕಾ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಸಿಹಿ ತಿನ್ನಿಸಿ ಅಭಿನಂದಿಸಿದ್ದಾರೆ. ವಯನಾಡು ಉಪ ಚುನಾವಣೆಯಲ್ಲಿ ಜಯಗಳಿಸಿದ ಪ್ರಿಯಾಂಕಾ ಅವರಿಗೆ ಅಭಿನಂದನೆಗಳು, ವಯನಾಡು ಮತದಾರರಿಗೆ ಧನ್ಯವಾದಗಳು ಎಂದು ಖರ್ಗೆ ಹೇಳಿದ್ದಾರೆ.
ವಯನಾಡ್ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು.
“ನನ್ನ ತಾಯಿ, ಸೋದರ, ಪತಿ ಮತ್ತು ನನ್ನ ಎರಡು ಆಭರಣಗಳಾದ ರೈಹಾನ್ ಮತ್ತು ಮಿರಾಯಾ ಅವರಿಗೆ ಧನ್ಯವಾದಗಳು. ನೀವು ನನಗೆ ನೀಡುವ ಪ್ರೀತಿ ಮತ್ತು ಧೈರ್ಯಕ್ಕೆ ಯಾವುದೇ ಕೃತಜ್ಞತೆ ಎಂದಿಗೂ ಸಾಕಾಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದು, ವಯನಾಡಿನಲ್ಲಿ ಗೆಲುವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.