ಟಾಲಿವುಡ್ ನ ಖ್ಯಾತ ನಟ ನಾಗಚೈತನ್ಯ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯದಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ.
2009ರಲ್ಲಿ ತೆರೆಕಂಡ ವಾಸುವರ್ಮ ನಿರ್ದೇಶನದ ‘ಜೋಶ್’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಬಳಿಕ ‘ಯೇ ಮಾಯಾ ಚೇಸವೇ’ ನಲ್ಲಿ ತೆರೆ ಹಂಚಿಕೊಂಡರು. ನಟ ನಾಗಚೈತನ್ಯ 2010 ರಂದು ತಮಿಳಿನ ‘ವಿನ್ನೈತಾಂಡಿ ವರುವಾಯಾ’ ಚಿತ್ರ ಒಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ನಟ ನಾಗಚೈತನ್ಯ ಅಂದಿನಿಂದ ಇಲ್ಲಿಯವರೆಗೂ ಲವ್ ಸ್ಟೋರಿ, ಆಕ್ಷನ್ ಸೇರಿದಂತೆ ಎಲ್ಲ ರೀತಿಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಕಳೆದ ವರ್ಷ ʼಕಸ್ಟಡಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದ, ಇವರು ಇತ್ತೀಚಿಗೆ ʼತಾಂಡಲ್ʼ ಶೂಟಿಂಗಲ್ಲಿ ಬಿಜಿಯಾಗಿದ್ದಾರೆ. ನಾಗಚೈತನ್ಯ ಇತ್ತೀಚಿಗಷ್ಟೇ ಶೋಭಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡದ್ದು, ಇನ್ನೇನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.