ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಕಿರಣ್ ರಾಜ್ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚುತ್ತಿದ್ದು ಇವರ ನಟನೆಯ ‘ಮೇಘ’ ಚಿತ್ರ ಇನ್ನೇನು ತೆರೆ ಮೇಲೆ ಬರುವ ನಿರೀಕ್ಷೆಯಲ್ಲಿದೆ. ಇದರ ಟ್ರೈಲರ್ ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ.
ಚರಣ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಕೃಷಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯತೀಶ್ ಎಚ್ ಆರ್ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ಸೇರಿದಂತೆ ರಾಜೇಶ್ ನಟರಂಗ, ಶೋಭರಾಜ್, ಸಂಗೀತ, ತರಂಗ ವಿಶ್ವ, ಶ್ರೀವಿದ್ಯಾ ಶಾಸ್ತ್ರಿ, ಹಂಸ ಪ್ರತಾಪ್, ನಾಗೇಂದ್ರ ಶಾ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ನಾಗಮಂಗಲ ಜಯರಾಮ್, ಹನುಮಂತ ಗೌಡ, ಸೌರಬ್ ಕುಲಕರ್ಣಿ ಬಣ್ಣ ಹಚ್ಚಿದ್ದಾರೆ. ಬಾಲ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದ್ದು, ಗೌತಮ್ ನಾಯಕ್ ಸಂಕಲನ ಹಾಗೂ ಛಾಯಾಗ್ರಹಣವಿದೆ.