ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ, ಬೆಂಗಳೂರು ಅವರು 2024-25ನೇ ಸಾಲಿಗೆ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಂ.ಇ) ಘಟಕಗಳನ್ನು ಸ್ಥಾಪಿಸಲು ರಾಜ್ಯ ವಲಯದ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ-ವಿಶೇಷ ಘಟಕ ಯೋಜನೆಯಡಿ ಭೌತಿಕ–03 ಹಾಗೂ ಗಿರಿಜನ ಉಪಯೋಜನೆಯಡಿ ಭೌತಿಕ–01 ಗುರಿ ನಿಗಧಿಪಡಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಅದರಂತೆ ಈ ಯೋಜನೆಯಡಿ ಸ್ಥಾಪಿತವಾಗುವ ಜವಳಿ/ಸಿದ್ಧ ಉಡುಪು ತಯಾರಿಕಾ ಘಟಕಗಳಿಗೆ ಸರ್ಕಾರದ ಸಹಾಯಧನ ಶೇ.75 ಅಥವಾ ಗರಿಷ್ಠ 2 ಕೋಟಿಗಳಿಗೆ ಮಿತಿಗೊಳಿಸಲಾಗುವುದು.
ಸಾಲಾಧಾರಿತ ಬಂಡವಾಳ ಸಹಾಯಧನ ಶೇ.75 ಹಾಗೂ ಘಟಕಗಳು ಬ್ಯಾಂಕ್ನಿಂದ ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ಶೇ.15 ಒಟ್ಟಾರೆ ಸರ್ಕಾರದಿಂದ ಘಟಕಕ್ಕೆ ದೊರಕುವ ಸಹಾಯಧನ ಶೇ.90 ರಷ್ಟು ಇದ್ದು, ಜಿಲ್ಲೆಯಲ್ಲಿ ಜವಳಿ/ ಸಿದ್ಧ ಉಡುಪು ತಯಾರಿಕೆ ವೃತ್ತಿಯಲ್ಲಿ ಅನುಭವ ಇದ್ದು ಹೊಸದಾಗಿ ಜವಳಿ/ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲು ಇಚ್ಚಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಮುಖ್ಯಸ್ಥರನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08272-220365 ನ್ನು ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ತಿಳಿಸಿದ್ದಾರೆ.