ರೆನ್ಸಿಲ್ ಡಿಸಿಲ್ವಾ ನಿರ್ದೇಶನದ ರೋಮ್ಯಾಂಟಿಕ್ ಆಕ್ಷನ್ ಕಥಾದಾರಿತ ‘ಕುರ್ಬಾನ್’ ಚಿತ್ರ ಬಿಡುಗಡೆಯಾಗಿ ಇಂದಿಗೆ 15 ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದೆ.
ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯಶ್ ಜೋಹರ್ ಹಾಗೂ ಕರಣ್ ಜೋಹರ್ ನಿರ್ಮಾಣ ಮಾಡಿದ್ದು, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಸೇರಿದಂತೆ ವಿವೇಕ್ ಒಬೆರಾಯ್, ಕಿರಣ್ ಖೇರ್, ದಿಯಾ ಮಿರ್ಜಾ, ಓಂ ಪುರಿ, ನೌಹೀದ್ ಸೈರುಸಿ, ರೂಪಿಂದರ್ ನಾಗ್ರಾ, ಫೈಝ್ ಜಲಾಲಿ, ಕವಿತಾ ಶ್ರೀನಿವಾಸನ್, ತಾಹೆರ್ ಶಬ್ಬೀರ್, ಆಕಾಶ್ ಖುರಾನಾ, ಕುಲಭೂಷಣ್ ಖರ್ಬಂದಾ, ತೆರೆ ಹಂಚಿಕೊಂಡಿದ್ದು, ಸಲೀಂ ಸುಲೈಮಾನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಆಸಿಫ್ ಅಲಿ ಶೇಕ್ ಸಂಕಲನ, ಹೇಮಂತ್ ಚತುರ್ವೇದಿ ಛಾಯಾಗ್ರಹಣವಿದೆ.