HomeEntertainment'ದಸ್ಕತ್' ಚಿತ್ರದ ಟ್ರೈಲರ್ ರಿಲೀಸ್

‘ದಸ್ಕತ್’ ಚಿತ್ರದ ಟ್ರೈಲರ್ ರಿಲೀಸ್

ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಅನೀಶ್ ಪೂಜಾರಿ ನಿರ್ದೇಶಿಸಿರುವ ‘ದಸ್ಕತ್’ ಎಂಬ ತುಳು ಚಿತ್ರ ಈಗಾಗಲೇ ಭರ್ಜರಿ ಸೌಂಡ್ ಮಾಡಿದ್ದು, ಡಿಸೆಂಬರ್ 13 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಟ್ರೈಲರ್ ಬೋಧಿ ಮೀಡಿಯಾ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ವೀಕ್ಷಣೆ ಕಂಡಿದೆ.

ಈ ಚಿತ್ರವನ್ನು ಬೋಧಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ರಾಘವೇಂದ್ರ ಕುಡ್ವ ನಿರ್ಮಾಣ ಮಾಡಿದ್ದು, ಸಮರ್ಥನ್ ಎಸ್ ರಾವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗಣೇಶ್ ನಿರ್ಚಲ್ ಸಂಕಲನವಿದೆ. ದೀಕ್ಷಿತ್ ಕೆ ಅಂಡಿಂಜೆ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಯುವ ಶೆಟ್ಟಿ, ಚಂದ್ರಹಾಸ ಉಳ್ಳಾಲ್, ಯೋಗೀಶ್ ಶೆಟ್ಟಿ, ನೀರಜ್ ಕುಂಜರ್ಪ ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular